Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮಿನಿ ಸೀಸನ್ ಗೆ ಈ ವಾರ ತೆರೆ

ಬಿಗ್ ಬಾಸ್ ಮಿನಿ ಸೀಸನ್ ಗೆ ಈ ವಾರ ತೆರೆ
ಬೆಂಗಳೂರು , ಬುಧವಾರ, 1 ಸೆಪ್ಟಂಬರ್ 2021 (12:06 IST)
ಬೆಂಗಳೂರು: ಬಿಗ್ ಬಾಸ್ 8 ನೇ ಆವೃತ್ತಿ ಮುಗಿದ ಬಳಿಕ ವೀಕ್ಷಕರನ್ನು ಮನರಂಜಿಸಲು ಧಾರವಾಹಿ ಕಲಾವಿದರನ್ನಿಟ್ಟುಕೊಂಡು ಕಲರ್ಸ್ ವಾಹಿನಿ ಮಿನಿ ಬಿಗ್ ಬಾಸ್ ಸೀಸನ್ ಆರಂಭಿಸಿತ್ತು.


ಆರಂಭದಲ್ಲಿ ಇದು ಕೇವಲ ಆರು ದಿನಗಳ ಶೋ ಎಂದಿದ್ದರೂ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಎರಡು ವಾರಕ್ಕೆ ವಿಸ್ತರಿಸಲಾಯಿತು.

ಈ ವಾರ ಅಂತೂ ಮಿನಿ ಸೀಸನ್ ಗೆ ತೆರೆ ಬೀಳುವ ಸಮಯ ಬಂದಿದೆ. ಕಿಚ್ಚ ಸುದೀಪ್ ನಿರೂಪಕರಾಗಿ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಪ್ರತಿಯೊಬ್ಬ ಕಲಾವಿದರನ್ನೂ ಮಾತನಾಡಿಸಿ ಬಿಗ್ ಬಾಸ್ ಅನುಭವಗಳನ್ನು ಕೇಳಲಿದ್ದಾರೆ. ಬಳಿಕ ಬೆಸ್ಟ್ ಪರ್ಫಾರ್ಮರ್ ಯಾರೆಂದು ಆಯ್ಕೆ ಮಾಡಲಿದ್ದಾರೆ.  ಈ ಮೂಲಕ ಬಿಗ್ ಬಾಸ್ ಮಿನಿ ಸೀಸನ್ ಅಂತ್ಯಗೊಳ್ಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ಹುಲಿವೇಷ ಕುಣಿತ ವಿಡಿಯೋ ವೈರಲ್