Publish Date: Sat, 21 Aug 2021 (09:11 IST)
Updated Date: Sat, 21 Aug 2021 (09:27 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 8 ಸೀಸನ್ ನ ಜೋಡಿ ಜೀವ ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ಸ್ನೇಹ ಬಿಗ್ ಬಾಸ್ ಮುಗಿದ ಮೇಲೂ ಮುಂದುವರಿದಿದೆ ಎನ್ನುವುದಕ್ಕೆ ಪುರಾವೆಯೊಂದು ಸಿಕ್ಕಿದೆ.
ಬಿಗ್ ಬಾಸ್ ನಲ್ಲಿ ಜೊತೆಯಾಗಿಯೇ ಇರುತ್ತಿದ್ದ ಅರವಿಂದ್-ದಿವ್ಯಾ ಈಗ ಹೊರಗೆ ಬಂದ ಮೇಲೂ ಅದೇ ಸ್ನೇಹ ಉಳಿಸಿಕೊಂಡಿದ್ದಾರೆ ಎನ್ನುವುದಕ್ಕೆ ಅವರು ಇತ್ತೀಚೆಗೆ ಜೊತೆಯಾಗಿ ಕೊರೋನಾಗೆ ವ್ಯಾಕ್ಸಿನ್ ಹಾಕಿಸಿಕೊಂಡಿರುವುದೇ ಸಾಕ್ಷಿ.
ಅರವಿಂದ್ ಕೆ.ಪಿ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿರುವ ಫೋಟೋ ಹಾಕಿದ್ದು, ಕೆಲವೇ ಕ್ಷಣಗಳಲ್ಲಿ ಅದೇ ಸ್ಥಳದಲ್ಲಿ ದಿವ್ಯಾ ಕೂಡಾ ಅದೇ ನರ್ಸ್ ನಿಂದ ವ್ಯಾಕ್ಸಿನ್ ಚುಚ್ಚಿಸಿಕೊಳ್ಳುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ಹೀಗಾಗಿ ಇಬ್ಬರೂ ವ್ಯಾಕ್ಸಿನ್ ಕೂಡಾ ಒಟ್ಟಿಗೆ ಹಾಕಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.