Select Your Language

Notifications

webdunia
webdunia
webdunia
webdunia

30 ನಿಮಿಷದೊಳಗೆ ಆರು ಮಂದಿ ರೇಪಿಸ್ಟ್ ಗಳ ಪತ್ತೆ ಮಾಡಿದ ಪೊಲೀಸ್ ನಾಯಿ!

webdunia
ಅಹಮ್ಮದಾಬಾದ್ , ಶುಕ್ರವಾರ, 20 ಆಗಸ್ಟ್ 2021 (12:29 IST)
ಅಹಮ್ಮದಾಬಾದ್: ನಾಯಿ ಮೂಗು ಎಂದರೆ ಸುಮ್ನೇನಾ? ಗುಜರಾತ್ ನಲ್ಲಿ ಪೊಲೀಸ್ ನಾಯಿಯೊಂದು ಅರ್ಧಗಂಟೆಯ ಅವಧಿಯಲ್ಲಿ ಆರು ಮಂದಿ ಅತ್ಯಾಚಾರಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.


ಗುಜರಾತ್ ನ ವಡೋದರದಲ್ಲಿ 30 ವರ್ಷದ ಮಹಿಳೆಯ ಮೇಲೆ ಆರು ಮಂದಿ ಕಾಮುಕರು ಮಾನಭಂಗ ಮಾಡಿ ಹತ್ಯೆ ಮಾಡಿದ್ದರು. ಪೊಲೀಸ್ ವಿಚಾರಣೆ ವೇಳೆ ಮಹಿಳೆಯ ದುಪಟ್ಟಾ ಮತ್ತು ಒಂದು ಬಾಟಲಿಯನ್ನು ಮೂಸಿದ ಶ್ವಾನ ನೇರವಾಗಿ ಆರೋಪಿಗಳ ಬಳಿಗೆ ಪೊಲೀಸರನ್ನು ಕರೆದೊಯ್ದಿದೆ!

ಸುಮಾರು ಎರಡು ಕಿ.ಮೀ. ದೂರದವರೆಗೆ ಪೊಲೀಸರನ್ನು ಕರೆದೊಯ್ದು ಟೆಂಟ್ ಒಂದರಲ್ಲಿ ಅವಿತಿದ್ದ ಕಾಮುಕರನ್ನು ಹೊರಗೆಳೆಯಲು ಸಹಾಯ ಮಾಡಿದೆ. ಇದರಿಂದಾಗಿ ಪೊಲೀಸರು ಸುಲಭವಾಗಿ ಕಾಮುಕರನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಗೆ ತೆರಳಲು ರೆಡ್ಡಿಗೆ ಸುಪ್ರೀಂ ಸಮ್ಮತಿ