Daily Horoscope

Select Your Language

Notifications

webdunia
webdunia
webdunia
webdunia

ಡಿಫರೆಂಟ್ ಆಗಿ ಬರ್ತ್ ಡೇ ಆಚರಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದರು!

ಅಪರಾಧ ಸುದ್ದಿಗಳು
ಪುಣೆ: ಬರ್ತ್ ಡೇ ಪಾರ್ಟಿ ಡಿಫರೆಂಟ್ ಆಗಿರಲೆಂದು ಯುವಕರಿಬ್ಬರು ಕತ್ತಿ-ಖಡ್ಗ ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಪುಣೆಯಲ್ಲಿ ನಡೆದಿದೆ.


ಇಬ್ಬರು ಯುವಕರು ತಮ್ಮ ಬರ್ತ್ ಡೇ ಕೇಕ್ ಕಟ್ ಮಾಡಲು ಹರಿತವಾದ ಆಯುಧಗಳನ್ನು ಖರೀದಿಸಿ ತಂದಿದ್ದರು. ಬಳಿಕ ಅದರಲ್ಲೇ ಕೇಕ್ ಕಟ್ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.

ಇದರಿಂದಲೇ ಅವರೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿದ ಪೊಲೀಸರು ಯುವಕರನ್ನು ಸುಲಭವಾಗಿ ಸೆರೆಹಿಡಿದಿದ್ದು, ಜೊತೆಗೆ ಆಯುಧ ತಯಾರಿಸಿಕೊಟ್ಟ ವ್ಯಕ್ತಿಯನ್ನೂ ಬಂಧಿಸಿದ್ದಾರೆ. ಜೊತೆಗೆ ಅವರಿಂದ ಆಯುಧಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಅಂತೂ ಡಿಫರೆಂಟ್ ಆಗಿ ಬರ್ತ್ ಡೇ ಆಚರಿಸಲು ಹೋಗಿ ಯುವಕರೀಗ ಪೊಲೀಸರ ಅತಿಥಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ಮೊದಲ ಪರೀಕ್ಷಾ ಯಾನ ಯಶಸ್ವಿ!