Select Your Language

Notifications

webdunia
webdunia
webdunia
webdunia

ಗಣೇಶನ ವಿಗ್ರಹ ನುಂಗಿದ ಮಗು: ಮುಂದೇನಾಯ್ತು?!

ಗಣೇಶನ ವಿಗ್ರಹ ನುಂಗಿದ ಮಗು: ಮುಂದೇನಾಯ್ತು?!
ಬೆಂಗಳೂರು , ಭಾನುವಾರ, 25 ಜುಲೈ 2021 (10:48 IST)
ಬೆಂಗಳೂರು: ಮೂರು ವರ್ಷದ ಮಗುವೊಂದು ಗಣೇಶನ ವಿಗ್ರಹ ನುಂಗಿ ಅವಾಂತರ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮೂರು ವರ್ಷದ ಗಂಡು ಮಗು ಅಕಸ್ಮಾತ್ತಾಗಿ 4 ಸೆ.ಮೀ. ಉದ್ದದ ಗಣೇಶನ ವಿಗ್ರಹ ಹಾಕಿಕೊಂಡಿತ್ತು. ತಕ್ಷಣವೇ ಕುಟುಂಬಸ್ಥರು ಆತನನ್ನು ನಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ತಕ್ಷಣವೇ ಎಂಡೋಸ್ಕೋಪಿ ನೆರವಿನಿಂದ ವಿಗ್ರಹವನ್ನು ಹೊರ ತೆಗೆದಿದ್ದಾರೆ. ಇದು ಆಹಾರ ನಾಳದ ಮೇಲ್ಭಾಗದಲ್ಲಿ ಸಿಲುಕಿಕೊಂಡಿತ್ತು. ನಾಲ್ಕು ಗಂಟೆಗಳ ನಿರೀಕ್ಷಣೆಯ ಬಳಿಕ ಮಗುವನ್ನು ಡಿಸ್ಚಾರ್ಜ್ ಮಾಡಲಾಗಿದೆ. ಈಗ ಆರಾಮವಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯಾದ ಯುವರತ್ನ ನಟಿ ಸಯೇಶಾ