Select Your Language

Notifications

webdunia
webdunia
webdunia
webdunia

ಗಂಡನ ಜನನಾಂಗ ಹಿಸುಕಿ ಹತ್ಯೆ ಮಾಡಿದ ಪತ್ನಿ

ಗಂಡನ ಜನನಾಂಗ ಹಿಸುಕಿ ಹತ್ಯೆ ಮಾಡಿದ ಪತ್ನಿ
ಮೈಸೂರು , ಬುಧವಾರ, 21 ಜುಲೈ 2021 (11:44 IST)
ಮೈಸೂರು: ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿ ತನ್ನ ಪತಿಯ ಜನನಾಂಗವನ್ನೇ ಹಿಸುಕಿ ಹತ್ಯೆ ಮಾಡಿದ ನೀಚ ಕೃತ್ಯ ಮೈಸೂರಿನಲ್ಲಿ ನಡೆದಿದೆ.


ಈ ಪ್ರಕರಣ ನಡೆದಿದ್ದು ಒಂಭತ್ತು ತಿಂಗಳ ಹಿಂದೆ. ಆದರೆ ಈಗ ಪೊಲೀಸ್ ತನಿಖೆಯಿಂದ ನಿಜಾಂಶ ಬಯಲಾಗಿದೆ. ಈ ಸಂಬಂಧ ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.

ತನ್ನ ತವರು ಮನೆ ಸೇರಿಕೊಂಡಿದ್ದ ಪತ್ನಿಯನ್ನು ನೋಡಲು ಪತಿ ಬಂದಿದ್ದ. ಈ ವೇಳೆ ಆತನಿಗೆ ಕಾಫಿಯಲ್ಲಿ ಮತ್ತು ಬರಿಸುವ ಔಷಧಿ ಹಾಕಿ ಜನನಾಂಗ ಹಿಸುಕಿ ಕೊಲೆ ಮಾಡಲಾಗಿದೆ. ಆದರೆ ಕೃತ್ಯದ ಬಳಿಕ ಪತಿ ತಲೆನೋವು ಬಂತೆಂದು ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ನಾಟಕವಾಡಿದ್ದಳು. ಆದರೆ ವಿಚಾರಣೆ ನಡೆಸಿದ ಪೊಲೀಸರಿಗೆ ಸತ್ಯ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಲವಂತವಾಗಿ ಪತ್ನಿಗೆ ಆಸಿಡ್ ಕುಡಿಸಿದ ಗಂಡ, ಅತ್ತಿಗೆ