Select Your Language

Notifications

webdunia
webdunia
webdunia
webdunia

ವಿಕ್ರಾಂತ್ ಮೊದಲ ಪರೀಕ್ಷಾ ಯಾನ ಯಶಸ್ವಿ!

ವಿಕ್ರಾಂತ್ ಮೊದಲ ಪರೀಕ್ಷಾ ಯಾನ ಯಶಸ್ವಿ!
ನವದೆಹಲಿ , ಸೋಮವಾರ, 9 ಆಗಸ್ಟ್ 2021 (09:05 IST)
ನವದೆಹಲಿ(ಆ.09): ಸ್ವದೇಶಿ ನಿರ್ಮಿತ ಮೊದಲ ಯುದ್ಧ ವಿಮಾನ ಸಾಗಣೆ ನೌಕೆ- ವಿಕ್ರಾಂತ್ ಐದು ದಿನಗಳ ಮೊದಲ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಗಿ ಪೂರ್ಣಗೊಳಿಸಿದೆ.ನೌಕೆ ಬುಧವಾರ ತನ್ನ ಯಾನವನ್ನು ಆರಂಭಿಸಿತ್ತು. ನೌಕೆಯ ಪ್ರಾಯೋಗಿಕ ಸಂಚಾರ ಉದ್ದೇಶಿತ ರೀತಿಯಲ್ಲಿ ನೆರವೇರಿದ್ದು, ಹಡಗಿನ ಕಾರ್ಯಕ್ಷಮತೆ ತೃಪ್ತಿ ತಂದಿದೆ. ಸಹಾಯಕ ಉಪಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ನೌಕಾ ಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.

ಈ ಯುದ್ದ ನೌಕೆಯು ಮಿಗ್- 29ಕೆ ಯುದ್ಧ ವಿಮಾನಗಳು, ಕಾಮೋವ್- 31 ಹೆಲಿಕಾಪ್ಟರ್ಗಳು, ಎಂಎಚ್ಆರ್ ಮಲ್ಟಿರೋಲ್ ಹೆಲಿಕಾಪ್ಟರ್ಗಳ ಮೂಲಕ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನೌಕೆಯ ಪ್ರಾಯೋಗಿಕ ಸಂಚಾರ ಯಶಸ್ವಿ ಆಗಿರುವುದು ಮಹತ್ವದ ಮಲಿಗಲ್ಲಾಗಿದ್ದು, 2022ರಲ್ಲಿ ನೌಕೆ ಅಧಿಕೃತವಾಗಿ ಸೇನೆಗೆ ಸೇರ್ಪಡೆ ಆಗುವುದಕ್ಕೂ ಮುನ್ನ ಇಂತಹ ಹಲವಾರು ಪ್ರಾಯೋಗಿಕ ಸಂಚಾರಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಜಡ್ಜ್ಗಳ ಭದ್ರತೆಗೆ ವಿಶೇಷ ರಕ್ಷಣಾ ಪಡೆ: ಸಿಜೆಐ ಎನ್. ವಿ. ರಮಣ ಸಲಹೆ