Publish Date: Sat, 31 Jul 2021 (09:10 IST)
Updated Date: Sat, 31 Jul 2021 (09:23 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಈಗ ಭಾರೀ ಸದ್ದು ಮಾಡುತ್ತಿದೆ. ಚಿತ್ರತಂಡ ಇಂದು ಅಭಿಮಾನಿಗಳಿಗೆ ಹೊಸ ಪೋಸ್ಟರ್ ಬಿಡುಗಡೆ ಮಾಡಲಿದೆ.
ವಿಕ್ರಾಂತ್ ರೋಣದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅತಿಥಿ ಪಾತ್ರ ಮಾಡಿ, ಒಂದು ಹಾಡಿಗೂ ಹೆಜ್ಜೆ ಹಾಕಿದ್ದಾರೆ. ಅವರು ಈ ಸಿನಿಮಾದಲ್ಲಿ ಯಾವ ಪಾತ್ರ ಮಾಡಲಿದ್ದಾರೆ ಎಂಬುದರ ಕುತೂಹಲ ತಣಿಸಲು ಇಂದು ಪೋಸ್ಟರ್ ಬಿಡುಗಡೆಯಾಗಲಿದೆ.
ವಿಕ್ರಾಂತ್ ರೋಣನಲ್ಲಿ ಜಿಆರ್ ಎನ್ನುವ ಕ್ಯಾರೆಕ್ಟರ್ ನಿಂದ ಗುರುತಿಸಿಕೊಳ್ಳಲಿರುವ ಜಾಕ್ವಲಿನ್ ಫಸ್ಟ್ ಲುಕ್ ಇಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಅಭಿಮಾನಿಗಳೂ ಬಾಲಿವುಡ್ ಬೆಡಗಿಯ ಅವತಾರ ನೋಡಲು ಕಾಯುತ್ತಿದ್ದಾರೆ.