ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಕೋಟಿಗೊಬ್ಬ 3 ಸಿನಿಮಾ ಬಗ್ಗೆ ಹೊಸ ಅಪ್ ಡೇಟ್ ಒಂದನ್ನು ಕೊಟ್ಟಿದ್ದಾರೆ.
ಸುದೀಪ್ ಕೋಟಿಗೊಬ್ಬ 3 ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಇದರೊಂದಿಗೆ ಸಿನಿಮಾ ಸಂಪೂರ್ಣವಾಗಿ ತೆರೆಗೆ ಬರಲು ರೆಡಿಯಾಗಿದೆ ಎಂದು ಹೇಳಿದ್ದಾರೆ.
ಇದುವರೆಗೆ ಬೇರೆ ಎಲ್ಲಾ ಕೆಲಸಗಳೂ ಮುಗಿದಿದ್ದವು. ಎಲ್ಲರೂ ಅವರವರ ಪಾಲಿನ ಡಬ್ಬಿಂಗ್ ಮುಗಿಸಿದ್ದರು. ಆದರೆ ನನ್ನದು ಬಾಕಿ ಇತ್ತು. ಈಗ ನನ್ನದೂ ಮುಗಿದಿದೆ. ಶಿವ ಮತ್ತು ಸತ್ಯ ಆಗಿ ಕಾಣಿಸಿಕೊಳ್ಳುವುದು ವಿಶೇಷ ಅನುಭವ. ಸದ್ಯದಲ್ಲೇ ನಿಮ್ಮೆದುರಿಗೆ ಬಲಿದ್ದೇವೆ ಎಂದಿದ್ದಾರೆ.