Select Your Language

Notifications

webdunia
webdunia
webdunia
webdunia

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಗೆ ಥ್ಯಾಂಕ್ಸ್ ಹೇಳಿದ ಕಿಚ್ಚ ಸುದೀಪ್

webdunia
ಬೆಂಗಳೂರು , ಶನಿವಾರ, 17 ಜುಲೈ 2021 (10:12 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದರಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕುಣಿದಿದ್ದು ಎಲ್ಲರಿಗೂ ಗೊತ್ತೇ ಇದೆ.

Photo Courtesy: Twitter

ಇದೀಗ ವಿಕ್ರಾಂತ್ ರೋಣ ಚಿತ್ರೀಕರಣ ಮುಕ್ತಾಯವಾಗಿದ್ದು, ನಟ ಸುದೀಪ್ ಹಾಡೊಂದರ ಚಿತ್ರೀಕರಣಕ್ಕೆ ಬಂದ ಜಾಕ್ವೆಲಿನ್ ಗೆ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ವಿಶೇಷ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿತ್ತು. ಈ ಹಾಡಿಗೆ ನಿಮ್ಮಿಂದಾಗಿ ವಿಶೇಷ ಎನರ್ಜಿ ಬಂತು ಎಂದು ಜಾಕ್ವೆಲಿನ್ ಹೊಗಳಿರುವ ಸುದೀಪ್ ನೀವು ನೃತ್ಯ ಮಾಡಿದ್ದು ನೋಡಿ ನಾನೂ ಒಂದೆರಡು ಹೆಜ್ಜೆ ಹಾಕುವಂತಾಯಿತು ಎಂದು ಕಾಲೆಳೆದಿದ್ದಾರೆ.

ಇನ್ನು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿರುವ ಜಾಕ್ವೆಲಿನ್ ಕನ್ನಡದಲ್ಲೇ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದರಂತೆ. ದಕ್ಷಿಣ ಭಾರತದ ಭಾಷೆಯೇ ಗೊತ್ತಿಲ್ಲದೇ ಇದ್ದರೂ ತಮಗೆ ಗೊತ್ತಿರುವ ಸಿಂಹಳೀಸ್ ಭಾಷೆಯಲ್ಲೇ ಕನ್ನಡ ಡೈಲಾಗ್ ಗಳನ್ನು ಬರೆದು ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಸಂದರ್ಶನವೊಂದರಲ್ಲಿ ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಥರ್ವ್ ಕೈಲಿ ಏಟು ತಿಂದ ಐರಾ: ಯಶ್-ರಾಧಿಕಾ ಮಕ್ಕಳ ಆಟಕ್ಕೆ ಮನಸೋತ ನೆಟ್ಟಿಗರು