Select Your Language

Notifications

webdunia
webdunia
webdunia
Wednesday, 9 April 2025
webdunia

ವಿಕ್ರಾಂತ್ ರೋಣ ಬಗ್ಗೆ ಭವಿಷ್ಯ ನುಡಿದ ಜಾಕ್ವೆಲಿನ್ ಫರ್ನಾಂಡಿಸ್

ವಿಕ್ರಾಂತ್ ರೋಣ
ಬೆಂಗಳೂರು , ಮಂಗಳವಾರ, 20 ಜುಲೈ 2021 (10:15 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗುವುದರಲ್ಲಿ ಸಂಶಯವಿಲ್ಲ.
Photo Courtesy: Twitter


ಈ ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಇದೀಗ ಚಿತ್ರೀಕರಣ ಮುಗಿಸಿ ಹೋಗಿರುವ ಜಾಕ್ವೆಲಿನ್ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ವಿಕ್ರಾಂತ್ ರೋಣದಲ್ಲಿ ತಾವು ವಿಶೇಷ ಪಾತ್ರ ಮಾಡಿರುವುದಾಗಿ ಹೇಳಿಕೊಂಡಿರುವ ಜಾಕ್ವೆಲಿನ್ ಈ ಸಿನಿಮಾ ಜಾಗತಿಕವಾಗಿ ಸದ್ದು ಮಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಿಚ್ಚ ಸುದೀಪ್ ಮತ್ತು ಇಡೀ ಚಿತ್ರತಂಡದ ಜೊತೆಗೆ ಕೆಲಸ ಮಾಡಿರುವ ಕ್ಷಣಗಳು ಅವಿಸ್ಮರಣೀಯ. ಚಿತ್ರತಂಡ ನನ್ನನ್ನು ಚೆನ್ನಾಗಿ ನೋಡಿಕೊಂಡಿತು. ಇದೀಗ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಬಹುದು ಎಂದು ಕುತೂಹಲದಿಂದ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮೇಲೆ ಬ್ಲೂ ಫಿಲಂ ದಂಧೆ ಆರೋಪ