Publish Date: Tue, 20 Jul 2021 (09:44 IST)
Updated Date: Tue, 20 Jul 2021 (09:51 IST)
ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಕ್ಕೊಳಗಾಗಿರುವ ನಟ ದರ್ಶನ್ ಗೆ ಈಗ ಯುವ ನಟರಿಂದ ಬೆಂಬಲ ವ್ಯಕ್ತವಾಗಿದೆ.
ದರ್ಶನ್ ಸದಾ ತಮ್ಮ ಸಹೋದರನಂತೆ ಕಾಣುವ ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ಅಭಿಷೇಕ್ ಅಂಬರೀಶ್, ಯುವ ನಟ ಧನ್ವೀರ್ ಗೌಡ ದರ್ಶನ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಭಿಷೇಕ್ ಅಂಬರೀಶ್ ದರ್ಶನ್ ಜೊತೆಗಿರುವ ಫೋಟೋ ಜೊತೆಗೆ ಇಮೋಜಿ ಪ್ರಕಟಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಧನ್ವೀರ್ ಗೌಡ ಸುದೀರ್ಘ ಪೋಸ್ಟ್ ಮೂಲಕ ದರ್ಶನ್ ಗೆ ಬೆಂಬಲ ಸೂಚಿಸಿದ್ದಾರೆ.
ಯಾರು ಏನೇ ಹೇಳಿದರೂ ಯುವ ಕಲಾವಿದರ ಬೆನ್ನುಲುಬಾಗಿ ನಿಲ್ಲುವ ದರ್ಶನ್ ಸರ್ ಗೆ ನನ್ನ ಬೆಂಬಲವಿರುತ್ತದೆ ಎಂದು ಬರೆದುಕೊಂಡಿದ್ದಾರೆ. ಇನ್ನು, ನಟ ಪ್ರಜ್ವಲ್ ದೇವರಾಜ್ ಕೂಡಾ ದರ್ಶನ್ ಜೊತೆಗಿನ ಫೋಟೋ ಪ್ರಕಟಿಸಿ, ನಾವು ಯಾವತ್ತೂ ನಿಮ್ಮೊಂದಿಗದ್ದೇವೆ ಎಂದು ಬರೆದುಕೊಂಡಿದ್ದಾರೆ.