Select Your Language

Notifications

webdunia
webdunia
webdunia
webdunia

ಆರೋಪಿಯ ಮದುವೆಯಾಗಲು ಕೋರ್ಟ್ ಒಪ್ಪಿಗೆ ಕೇಳಿದ ಯುವತಿ

ಅಪರಾಧ ಸುದ್ದಿಗಳು
ತಿರುವನಂತಪುರಂ , ಸೋಮವಾರ, 2 ಆಗಸ್ಟ್ 2021 (09:49 IST)
ತಿರುವನಂತಪುರಂ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಮದುವೆಯಾಗಲು ಅವಕಾಶ ಕೊಡುವಂತೆ ಕೇರಳದ ಸಂತ್ರಸ್ತ ಯುವತಿಯೊಬ್ಬಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾಳೆ.


53 ವರ್ಷದ ಕ್ಯಾಥೋಲಿಕ್ ಚರ್ಚ್ ಪ್ರೀಸ್ಟ್ ರಾಬಿನ್ ವಡಕ್ಕಾಂಚೇರಿ ಯುವತಿ ಮೇಲೆ ಮಾನಭಂಗ ಮಾಡಿದ್ದ. ಈ ಸಂಬಂಧ ಆತನಿಗೆ 20 ವರ್ಷ ಜೈಲು ಶಿಕ್ಷೆಯೂ ವಿಧಿಸಲಾಗಿತ್ತು.

ಆದರೆ ಇದೀಗ ಯುವತಿ ಆರೋಪಿಯನ್ನು ನನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಲು ಬಯಸಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟು ಪ್ರಕರಣ ಖುಲಾಸೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾಳೆ. ಕೇರಳ ಹೈಕೋರ್ಟ್ ಆಕೆಗೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾಳೆ. 2017 ರಲ್ಲಿ ಅತ್ಯಾಚಾರ ಪ್ರಕರಣ ನಡೆದಿತ್ತು. ಆಗ ಆಕೆ ಅಪ್ರಾಪ್ತೆಯಾಗಿದ್ದಳು ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಗಳ ಕಾರ್ಯದರ್ಶಿ ನೇಮಕಗೊಳಿಸಿದ ಸರಕಾರ