Select Your Language

Notifications

webdunia
webdunia
webdunia
webdunia

2024 ರ ಒಲಿಂಪಿಕ್ಸ್ ಗೆ ಈಗಲೇ ತಯಾರಿ: ಕ್ರೀಡಾ ಸಚಿವರ ಯೋಜನೆ

2024 ರ ಒಲಿಂಪಿಕ್ಸ್ ಗೆ ಈಗಲೇ ತಯಾರಿ: ಕ್ರೀಡಾ ಸಚಿವರ ಯೋಜನೆ
ಬೆಂಗಳೂರು , ಶನಿವಾರ, 21 ಆಗಸ್ಟ್ 2021 (08:53 IST)
ಬೆಂಗಳೂರು: 2024 ರಲ್ಲಿ ಪ್ಯಾರಿಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ರಾಜ್ಯದ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನಡೆಸುವ ಕೆಲಸಕ್ಕೆ ರಾಜ್ಯ ಸರ್ಕಾರ ಈಗಲೇ ಅಡಿಗಲ್ಲು ಹಾಕಿದೆ.


ಒಲಿಂಪಿಕ್ಸ್ ಗೆ ಆಟಗಾರರನ್ನು ತಯಾರುಗೊಳಿಸುವ ನಿಟ್ಟಿನಲ್ಲಿ ಅಮೃತ ಕ್ರೀಡಾ ದತ್ತು ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಕ್ರೀಡಾ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.

ಮುಂದಿನ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪದಕ ಪಟ್ಟಿಯಲ್ಲಿ ಟಾಪ್ 10 ರೊಳಗೆ ತರಬೇಕು. ಪದಕ ಗೆದ್ದವರಲ್ಲಿ ಹೆಚ್ಚಿನವರು ಕರ್ನಾಟಕದವರೇ ಆಗಬೇಕು ಎಂದು ಸಚಿವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಕೆಲಸಗಳು ಈಗಿನಿಂದಲೇ ಆರಂಭವಾಗಲಿದೆ. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವುದು, ಮೂಲಸೌಕರ್ಯಾಭಿವೃದ್ಧಿ ಒದಗಿಸುವುದು, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಇತ್ಯಾದಿ ಕೆಲಸ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಕ್ರಿಕೆಟಿಗರಿಗೆ ತೊಂದರೆಯಾದರೆ ಸುಮ್ಮನಿರಲ್ಲ ವಿರಾಟ್ ಕೊಹ್ಲಿ!