Publish Date: Fri, 20 Aug 2021 (09:44 IST)
Updated Date: Fri, 20 Aug 2021 (09:46 IST)
ದುಬೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನಾಡಲು ಅಬುದಾಬಿಗೆ ಬಂದಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯಕ್ಕೆ ಕ್ವಾರಂಟೈನ್ ನಲ್ಲಿದೆ.
ಕ್ವಾರಂಟೈನ್ ನಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಆಟಗಾರರು ತಂಗಿದ್ದಾರೆ. ಆದರೆ ಇಲ್ಲಿಯೂ ಧೋನಿ ಪಡೆಗೆ ಭರ್ಜರಿ ಅಭಿಮಾನಿಗಳಿದ್ದಾರೆ ಎನ್ನುವುದು ಸಾಬೀತಾಗಿದೆ.
ಹೋಟೆಲ್ ಹೊರಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಐಪಿಎಲ್ ಬಾವುಟ ಹಿಡಿದು ಅಭಿಮಾನಿಗಳು ಕ್ರಿಕೆಟಿಗರನ್ನು ದೂರದಿಂದಲೇ ಸ್ವಾಗತಿಸಿದ್ದಾರೆ. ಇದನ್ನು ಸ್ವತಃ ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸದ್ಯದಲ್ಲಿಯೇ ಕ್ವಾರಂಟೈನ್ ಮುಗಿಸಿ ಅಭ್ಯಾಸಕ್ಕೆ ಮರಳಲಿದ್ದಾರೆ.