Publish Date: Thu, 19 Aug 2021 (09:38 IST)
Updated Date: Thu, 19 Aug 2021 (09:40 IST)
ಬೆಂಗಳೂರು: ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಬಿಸಿಸಿಐ ಇತ್ತೀಚೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಆಹ್ವಾನ ನೀಡಿತ್ತು. ಆದರೆ ಇದುವರೆಗೆ ಹಾಲಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಬಿಟ್ಟರೆ ಬೇರೆ ಯಾರೂ ಅರ್ಜಿ ಸಲ್ಲಿಸಿಲ್ಲ.
ಹೀಗಾಗಿ ಬಿಸಿಸಿಐ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿದೆ. ಬೆಂಗಳೂರಿನಲ್ಲಿರುವ ಕ್ರಿಕೆಟ್ ಪುನಶ್ಚೇತನ ಕೇಂದ್ರಕ್ಕೆ ದ್ರಾವಿಡ್ ಹಾಲಿ ಮುಖ್ಯಸ್ಥರಾಗಿದ್ದಾರೆ. ಈ ಮೊದಲು ಬಿಸಿಸಿಐ ಆಗಸ್ಟ್ 15 ರವರೆಗೆ ಹೊಸ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಿತ್ತು.
ಆದರೆ ಇದುವರೆಗಾಗಿ ದ್ರಾವಿಡ್ ಪುನರಾಯ್ಕೆ ಬಯಸಿ ಅರ್ಜಿ ಸಲ್ಲಿಸಿದ್ದು ಬಿಟ್ಟರೆ ಬೇರೆ ಯಾರೂ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಮತ್ತಷ್ಟು ದಿನ ವಿಸ್ತರಿಸಲಾಗಿದೆ.