Publish Date: Thu, 19 Aug 2021 (09:18 IST)
Updated Date: Thu, 19 Aug 2021 (09:26 IST)
ಮುಂಬೈ: 2022 ರ ಐಪಿಎಲ್ ಗೆ 10 ತಂಡಗಳಿರುವುದು ಪಕ್ಕಾ ಎಂದು ಬಿಸಿಸಿಐ ಖಜಾಂಜಿ ಅರುಣ್ ಧಮಾಲ್ ಖಚಿತಪಡಿಸಿದ್ದಾರೆ.
ಮುಂದಿನ ಸೀಸನ್ ಗೆ ಎರಡು ತಂಡಗಳನ್ನು ಸೇರ್ಪಡೆಗೊಳಿಸುವ ಕುರಿತು ಈಗಾಗಲೇ ತಯಾರಿ ಆರಂಭವಾಗಿದೆ. ಪುಣೆ, ಅಹಮ್ಮದಾಬಾದ್ ಮತ್ತು ಲಕ್ನೋ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಅರುಣ್ ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಐಪಿಎಲ್ 14 ರ ಪಂದ್ಯಗಳನ್ನು ಆಯೋಜಿಸುವುದರತ್ತ ಬಿಸಿಸಿಐ ಗಮನ ಕೊಟ್ಟಿದೆ. ಇದಾದ ಬಳಿಕ ಮುಂದಿನ ಸೀಸನ್ ನ ತಯಾರಿ ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.