Publish Date: Wed, 18 Aug 2021 (09:48 IST)
Updated Date: Wed, 18 Aug 2021 (09:51 IST)
ರಾಂಚಿ: ಧೋನಿಯನ್ನು ಆರಾಧಿಸುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬ ಹುಚ್ಚು ಅಭಿಮಾನಿ ತನ್ನ ಆರಾಧ್ಯ ದೈವವನ್ನು ನೋಡಲು 14 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದ್ದಾನೆ!
ಹರ್ಯಾಣದ 18 ವರ್ಷದ ಕ್ಷೌರಿಕನೊಬ್ಬ ತನ್ನ ತವರಿನಿಂದ ರಾಂಚಿಯ ಧೋನಿ ಫಾರ್ಮ್ ಹೌಸ್ ವರೆಗೆ 16 ದಿನಗಳವರೆಗೆ ಪಾದ ಯಾತ್ರೆ ನಡೆಸಿ ಬಂದಿದ್ದಾನೆ. ಆದರೆ ಧೋನಿ ಈಗ ಐಪಿಎಲ್ ಗಾಗಿ ದುಬೈಗೆ ತೆರಳಿದ್ದು, ಇನ್ನು ಮೂರು ತಿಂಗಳಿಗೆ ಅವರ ಭೇಟಿ ಸಾಧ‍್ಯವಿಲ್ಲ.
ಹಾಗಿದ್ದರೂ ಧೋನಿ ಬರುವವರೆಗೆ ಇಲ್ಲೇ ಇರುತ್ತೇನೆ ಎಂದು ಯುವಕ ಮನೆಯ ಹೊರಗಡೆಯೇ ಠಿಕಾಣಿ ಹೂಡಿದ್ದ. ಕೊನೆಗೆ ಆತನನ್ನು ಸ್ಥಳೀಯ ಉದ್ಯಮಿಯೊಬ್ಬರು ಮನ ಒಲಿಸಿ ವಿಮಾನ ಟಿಕೆಟ್ ಬುಕ್ ಮಾಡಿಸಿದ್ದಾರೆ.