Publish Date: Wed, 18 Aug 2021 (08:45 IST)
Updated Date: Wed, 18 Aug 2021 (08:59 IST)
ನವದೆಹಲಿ: ಟೋಕಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪಾನಿಪತ್ ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದನ್ನು ಅರ್ಧಕ್ಕೇ ಬಿಟ್ಟು ತೆರಳಿದ್ದಾರೆ.
ಇದಕ್ಕೆ ಕಾರಣ ಜ್ವರ. ಕಾರ್ಯಕ್ರಮದ ವೇಳೆ ಅಸ್ವಸ್ಥರಾದ ಹಿನ್ನಲೆಯಲ್ಲಿ ನೀರಜ್ ಅರ್ಧಕ್ಕೇ ಕಾರ್ಯಕ್ರಮ ಬಿಟ್ಟು ಹೊರನಡೆದಿದ್ದಲ್ಲದೆ, ಅವರು ತೆರಳಿದ್ದರಿಂದ ಕಾರ್ಯಕ್ರಮವನ್ನೂ ಮೊಟಕುಗೊಳಿಸಲಾಗಿದೆ.
ದೆಹಲಿಯಿಂದ ಪಾನಿಪತ್ ವರೆಗೆ ನೀರಜ್ ಆರು ಗಂಟೆಗಳ ಕಾಲ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಇದರಿಂದಾಗಿಯೇ ಬಳಲಿ ಅವರಿಗೆ ಜ್ವರ ಬಂದಿದೆ ಎಂದು ಕುಟುಂಬ ಮೂಲಗಳು ಹೇಳಿವೆ. ಇದೀಗ ಅವರನ್ನು ವಿಶ್ರಾಂತಿಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ.