ಭಾರತ ತಂಡ ಸಾಂಪ್ರದಾಯಿಕ ಎದು
ರಾಳಿ ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಅರಬ್ ದೇಶಗಳಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಲ್ಲಿ ಅಭಿಯಾನ ಆರಂಭಿಸಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಮಂಗಳವಾರ ಯುಎಇ ಮತ್ತು ಓಮನ್ ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿತು.
ಅಕ್ಟೋಬರ್ 24ರಂದು ಭಾರತ ದುಬೈನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಅಲ್ಲದೇ ನ್ಯೂಜಿಲೆಂಡ್ ಮತ್ತು ಆಫ್ಘಾನಿಸ್ತಾನ ತಂಡಗಳು ಗುಂಪು 2ರಲ್ಲಿ ಸ್ಥಾನ ಪಡೆದಿವೆ. ಅಕ್ಟೋಬರ್ 31ರಂದು ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಭಾರತದ ಲೀಗ್ ಹಂತದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ.
ಭಾರತದ ಪಂದ್ಯಗಳು
ಅಕ್ಟೋಬರ್ 24- ಪಾಕಿಸ್ತಾನ
ಅಕ್ಟೋಬರ್ 31- ನ್ಯೂಜಿಲೆಂಡ್
ನವೆಂಬರ್ 3- ಆಫ್ಘಾನಿಸ್ತಾನ
ನವೆಂಬರ್ 5- ಬಿ2 (ಅರ್ಹತೆ ಪಡೆದ ತಂಡ)
ನವೆಂಬರ್ 8- ಎ2 (ಅರ್ಹತೆ ಪಡೆದ ತಂಡ)