Publish Date: Tue, 17 Aug 2021 (10:00 IST)
Updated Date: Tue, 17 Aug 2021 (10:13 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮೈದಾನದಲ್ಲಿ ನಡೆದುಕೊಂಡ ರೀತಿಯೇ ಈಗ ನೆಟ್ಟಿಗರಿಗೆ ಚರ್ಚೆಯ ವಿಷಯವಾಗಿದೆ.
ಇಬ್ಬರೂ ದಿಗ್ಗಜ ಕ್ರಿಕೆಟಿಗರ ನಡುವೆ ಶೀತಲ ಸಮರವಿದೆ ಎಂಬ ಗಾಸಿಪ್ ಸದಾ ಹರಿದಾಡುತ್ತಿರುತ್ತದೆ. ಅದಕ್ಕೆ ಪೂರಕವೆಂಬಂತೆ ಇಬ್ಬರೂ ಮೈದಾನದಲ್ಲಿ ಆತ್ಮೀಯವಾಗಿರುವ ಕ್ಷಣಗಳೇ ಕಡಿಮೆ.
ಆದರೆ ಲಾರ್ಡ್ಸ್ ಟೆಸ್ಟ್ ಗೆಲುವಿನ ಬಳಿಕ ರೋಹಿತ್ ರನ್ನು ಕೊಹ್ಲಿ ಬಿಗಿಯಾಗಿ ತಬ್ಬಿ ಸಂಭ್ರಮಿಸಿದ್ದು ಈಗ ನೆಟ್ಟಿಗರಿಗೆ ಭಾರೀ ಖುಷಿ ನೀಡಿದೆ. ಗೆಲುವಿನಷ್ಟೇ ಅಭಿಮಾನಿಗಳು ಈ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ. ಇದು ಇಂದಿನ ಬೆಸ್ಟ್ ಫೋಟೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.