Select Your Language

Notifications

webdunia
webdunia
webdunia
webdunia

ಅರ್ಧಶತಕ ಗಳಿಸಿ ಶತಕ ಗಳಿಸಿದಂತೆ ಸಂಭ್ರಮಿಸಿದ ಮೊಹಮ್ಮದ್ ಶಮಿ

ಅರ್ಧಶತಕ ಗಳಿಸಿ ಶತಕ ಗಳಿಸಿದಂತೆ ಸಂಭ್ರಮಿಸಿದ ಮೊಹಮ್ಮದ್ ಶಮಿ
ಲಾರ್ಡ್ಸ್ , ಸೋಮವಾರ, 16 ಆಗಸ್ಟ್ 2021 (17:37 IST)
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ದಿನದ ಊಟದ ವಿರಾಮದ ವೇಳೆಗೆ 8 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿದ್ದು, 259 ರನ್ ಗಳ ಮುನ್ನಡೆ ಗಳಿಸಿದೆ.
Photo Courtesy: Twitter


ಮೊಹಮ್ಮದ್ ಶಮಿ ಟೆಸ್ಟ್ ಕೆರಿಯರ್ ನ ಎರಡನೇ ಅರ್ಧಶತಕ ಗಳಿಸಿ (52) ಮಿಂಚಿದರೆ, ಸಾಥಿ ಜಸ್ಪ್ರೀತ್ ಬುಮ್ರಾ 30 ರನ್ ಗಳೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಮನಮೋಹಕ ಸಿಕ್ಸರ್ ನೊಂದಿಗೆ ಅರ್ಧಶತಕ ಪೂರ್ತಿಮಾಡಿದ ಶಮಿ ಬ್ಯಾಟ್ ಮೇಲೆತ್ತಿ ಶತಕ ಗಳಿಸಿದಂತೆ ಸಂಭ್ರಮಿಸಿದರೆ, ಪೆವಿಲಿಯನ್ ನಲ್ಲಿದ್ದ ಆಟಗಾರರು ಅವರ ಈ ಉಪಯುಕ್ತ ಇನಿಂಗ್ಸ್ ಗೆ ಸಲಾಂ ಹೊಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಒಲಿಂಪಿಕ್ ವೀರರಿಗೆ ಕೊಟ್ಟ ಮಾತು ನೆರವೇರಿಸಿದ ಪ್ರಧಾನಿ ಮೋದಿ