ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಳುಗಳನ್ನು ಭೇಟಿ ಮಾಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿ ಆ ಭರವಸೆಯನ್ನು ಕೊನೆಗೂ ನೆರವೇರಿಸಿದ್ದಾರೆ.
ಪದಕ ಗೆದ್ದು ಬಂದ ಮೇಲೆ ಜೊತೆಯಾಗಿ ಕೂತು ಐಸ್ ಕ್ರೀಂ ಸವಿಯೋಣ ಎಂದು ಮೋದಿ ಒಲಿಂಪಿಕ್ ಗೆ ಮೊದಲು ಭರವಸೆ ನೀಡಿದ್ದರು. ಅದರಂತೆ ಇಂದು ಎಲ್ಲಾ ಕ್ರೀಡಾಳುಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಔತಣಕೂಟ ನೀಡಿದ್ದಾರೆ.
ಈ ಔತಣಕೂಟದಲ್ಲಿ ನೀರಜ್ ಚೋಪ್ರಾ, ಪಿ.ವಿ. ಸಿಂಧು, ಹಾಕಿ ಆಟಗಾರರು ಸೇರಿದಂತೆ ಎಲ್ಲಾ ಸಾಧಕರೂ ಭಾಗಿಯಾಗಿದ್ದರು. ಅವರೊಂದಿಗೆ ಔತಣ ಸವಿದಿದ್ದಲ್ಲದೆ, ಜೊತೆಗೆ ಫೋಟೋಗೆ ಪೋಸ್ ನೀಡಿ ಮೋದಿ ಖುಷಿಪಟ್ಟರು.