ಲಾರ್ಡ್ಸ್: ಟೀಂ ಇಂಡಿಯಾ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ರನ್ ಗಳಿಸುವುದನ್ನೇ ಮರೆತಿದ್ದಾರೆ.
ಕಳಪೆ ಫಾರ್ಮ್ ನಲ್ಲಿರುವ ಕೊಹ್ಲಿ ಸಮಸ್ಯೆಯೇನೆಂದು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ವಿವರಿಸಿದ್ದಾರೆ. ದ್ವಿತೀಯ ಟೆಸ್ಟ್ ನಲ್ಲಂತೂ ಕೊಹ್ಲಿ ಆಡಿದ ಪರಿ ನೋಡಿದ ಬಳಿಕ ಪ್ರತಿಕ್ರಿಯಿಸಿರುವ ಗವಾಸ್ಕರ್ ಅವರ ಬ್ಯಾಟ್ ಎಲ್ಲೋ, ಪಾದ ಇನ್ನೆಲ್ಲೋ ಇದೆ ಎಂದಿದ್ದಾರೆ.
ಅವರು ಆಫ್ ಸ್ಟಂಪ್ ಆಚೆಗಿನ ಚೆಂಡನ್ನು ಕೊಂಚ ಬೇಗ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯಂತೂ ಅವರ ಪಾದ ಒಂದು ಕಡೆ, ಬ್ಯಾಟ್ ಇನ್ನೆಲ್ಲೋ ಇತ್ತು. ಅದರ ಅರ್ಥ ಅವರು ಚೆನ್ನಾಗಿಲ್ಲ ಆಡುತ್ತಿಲ್ಲ ಎಂದಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.