Select Your Language

Notifications

webdunia
webdunia
webdunia
webdunia

ನಮ್ಮಲ್ಲಿ ಒಬ್ಬರನ್ನು ಕೆಣಕಿದರೂ ಹುಷಾರ್! ಕೊಹ್ಲಿ ವಾರ್ನಿಂಗ್

ನಮ್ಮಲ್ಲಿ ಒಬ್ಬರನ್ನು ಕೆಣಕಿದರೂ ಹುಷಾರ್! ಕೊಹ್ಲಿ ವಾರ್ನಿಂಗ್
ಲಾರ್ಡ್ಸ್ , ಬುಧವಾರ, 18 ಆಗಸ್ಟ್ 2021 (09:10 IST)
ಲಾರ್ಡ್ಸ್: ನೀವು ನಮ್ಮ ತಂಡದಲ್ಲಿ ಒಬ್ಬರನ್ನು ಕೆಣಕಿದರೂ ನಾವು ಎಲ್ಲಾ 11 ಆಟಗಾರರೂ ನಿಮ್ಮ ಮೇಲೆ ಮುಗಿಬೀಳುತ್ತೇವೆ ಹೀಗಂತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರಾಳಿಗಳಿಗೆ ವಾರ್ನ್ ಮಾಡಿದ್ದಾರೆ.


ಲಾರ್ಡ್ಸ್ ಟೆಸ್ಟ್ ವೇಳೆ ಎದುರಾಳಿ ಕ್ರಿಕೆಟಿಗರಿಂದ, ಅಭಿಮಾನಿಗಳಿಂದ ಟೀಂ ಇಂಡಿಯಾ ಆಟಗಾರರು ಸಾಕಷ್ಟು ಕಿರಿ ಕಿರಿ ಅನುಭವಿಸಿದ್ದರು. ಅದರಲ್ಲೂ ಕೆಎಲ್ ರಾಹುಲ್ ಮೇಲಂತೂ ಇಂಗ್ಲೆಂಡ್ ಪ್ರೇಕ್ಷಕರು ಬಾಟಲಿ ಕಾರ್ಕ್ ಎಸೆದು ಹದ್ದುಮೀರಿದ ವರ್ತನೆ ತೋರಿದ್ದರು.

ನಮ್ಮ ಗೆಲುವಿಗೆ ಈ ಆನ್ ಫೀಲ್ಡ್ ಘರ್ಷಣೆಗಳೇ ಕಾರಣವಾಯ್ತು ಎಂದು ಕೊಹ್ಲಿ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ. ಕೊಹ್ಲಿಯನ್ನು ಮೈದಾನದಲ್ಲಿ ಕೆಣಕಿದರೆ ಅವರು ಅದರ ದುಪ್ಪಟ್ಟು ತಿರುಗಿಸಿಕೊಡುತ್ತಾರೆ ಎಂದು ಎಲ್ಲಾ ಎದುರಾಳಿಗಳಿಗೂ ಗೊತ್ತು. ಆದರೆ ಇಂಗ್ಲೆಂಡ್ ಕ್ರಿಕೆಟಿಗರು ಅದೇ ತಪ್ಪನ್ನು ಮಾಡಿ ಅದಕ್ಕೆ ತಕ್ಕ ಬೆಲೆ ಪಡೆದಿದ್ದಾರೆ. ಪಂದ್ಯದ ಬಳಿಕ ಕೊಹ್ಲಿ ‘ನಮಗೆ ಆನ್ ಫೀಲ್ಡ್ ನಲ್ಲಿ ನಡೆದ ಘಟನೆಗಳೇ ಗೆಲುವಿಗೆ ಸ್ಪೂರ್ತಿಯಾಯಿತು. ನಮ್ಮ ಒಬ್ಬ ಆಟಗಾರನನ್ನು ಕೆಣಕಿದರೆ ನಾವು ಎಲ್ಲಾ 11 ಆಟಗಾರರು ಸೇರಿ ಮುಯ್ಯಿ ತೀರಿಸಿಕೊಳ್ಳುತ್ತೇವೆ’ ಎಂದು ಎದುರಾಳಿಗಳಿಗೆ ನೇರವಾಗಿ ವಾರ್ನ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಳೇ ಪಂದ್ಯಕ್ಕೆ ದಾಖಲೆ ಶುರು ಹಚ್ಚಿಕೊಂಡ ಮೊಹಮ್ಮದ್ ಸಿರಾಜ್