ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಮೊದಲು ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಸುದ್ದಿಯಾಗಿದ್ದ ಧೋನಿ ಈಗ ಪಕ್ಕಾ ರಾಕ್ ಸ್ಟಾರ್ ಲುಕ್ ನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭರ್ಜರಿ ಪೋಷಾಕಿನ ಜೊತೆಗೆ ಕೂದಲಿಗೆ ಕಲರ್ ಮಾಡಿಕೊಂಡ ಅವರ ಹೊಸ ಲುಕ್ ನೋಡಿ ನೆಟ್ಟಿಗರು ಹೌಹಾರಿದ್ದಾರೆ.
ಕಳೆದ ಬಾರಿ ಐಪಿಎಲ್ 14 ಆರಂಭಕ್ಕೆ ಮೊದಲು ಧೋನಿ ಬೌದ್ಧ ಸನ್ಯಾಸಿನಯ ಲುಕ್ ನಲ್ಲಿರುವ ಜಾಹೀರಾತಿನ ಫೋಟೋವೊಂದು ವೈರಲ್ ಆಗಿತ್ತು. ಇದೀಗ ಉಳಿದ ಐಪಿಎಲ್ 14 ರ ಪಂದ್ಯಕ್ಕೆ ಮೊದಲು ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.