ದುಬೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಆಡಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಬುದಾಬಿಗೆ ಬಂದಿಳಿದಿದೆ.
ಧೋನಿ ನೇತೃತ್ವದ ಕೆಲವು ಆಟಗಾರರು ಈಗಾಗಲೇ ಅರಬರ ನಾಡಿಗೆ ಬಂದಿಳಿದಿದ್ದಾರೆ. ಮೊದಲು ಚೆನ್ನೈನಲ್ಲಿ ಒಟ್ಟು ಸೇರಿದ್ದ ಆಟಗಾರರು ಬಳಿಕ ಒಂದೇ ವಿಮಾನದಲ್ಲಿ ಅಬುದಾಬಿಗೆ ತೆರಳಿದ್ದಾರೆ.
ಸದ್ಯಕ್ಕೆ ದೇಶೀಯ ಕ್ರಿಕೆಟಿಗರು ಮಾತ್ರ ಪ್ರಯಾಣ ಮಾಡಿದ್ದಾರೆ. ಕೆಲವು ದಿನಗಳ ಬಳಿಕ ವಿದೇಶೀ ಆಟಗಾರರೂ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇಲ್ಲಿನ ನಿಯಮಗಳ ಪ್ರಕಾರ ಕ್ವಾರಂಟೈನ್ ಗೊಳಗಾಗಲಿದ್ದು, ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!