Publish Date: Sat, 21 Aug 2021 (09:03 IST)
Updated Date: Sat, 21 Aug 2021 (09:21 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಸ್ಯಾಟ್ ಲೈಟ್ ಹಕ್ಕು ಮಾರಾಟವಾದ ಬಗ್ಗೆ ನಿನ್ನೆ ವರಮಹಾಲಕ್ಷ್ಮಿ ಹಬ್ಬದ ದಿನ ಅಭಿಮಾನಿಗಳಿಗೆ ಹೊಂಬಾಳೆ ಫಿಲಂಸ್ ಭರ್ಜರಿ ಸುದ್ದಿಯನ್ನೇ ಕೊಟ್ಟಿತ್ತು.
ಹಾಗಿದ್ದರೂ ಅಭಿಮಾನಿಗಳಿಗೆ ಯಾಕೋ ಪೂರ್ತಿ ಖುಷಿಯಾಗಿಲ್ಲ. ಹಬ್ಬದ ದಿನ ಇದಕ್ಕಿಂತ ದೊಡ್ಡ ಸರ್ಪೈಸ್ ಸಿಗಬಹುದು ಎಂದು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.
ಕೆಜಿಎಫ್ 2 ರಿಲೀಸ್ ಡೇಟ್ ಯಾವಾಗ ಎಂದು ತಿಳಿಯಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಆದರೆ ಸಿನಿಮಾ ರಿಲೀಸ್ ಬಿಡಿ, ಹಾಡಿನ ರಿಲೀಸ್ ಬಗ್ಗೆಯೂ ಚಿತ್ರತಂಡ ಇದುವರೆಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಕೆಲವರು ಮೊದಲು ಸಿನಿಮಾ ರಿಲೀಸ್ ಡೇಟ್ ಯಾವಾಗ, ಹಾಡು ಯಾವಾಗ ಬರುತ್ತೆ ಹೇಳಿ ಎಂದು ಚಿತ್ರತಂಡವನ್ನು ಪ್ರಶ್ನೆ ಮಾಡಿದ್ದಾರೆ.