ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕೆಲವೇ ದಿನ ಬಾಕಿಯಿದ್ದು, ಅಭಿಮಾನಿಗಳು ಈಗಲೇ ಅದಕ್ಕೆ ತಯಾರಿ ನಡೆಸಿದ್ದಾರೆ.
ತಮ್ಮ ಮೆಚ್ಚಿನ ಬರ್ತ್ ಡೇಗೆ ವಿಶೇಷ ಬರ್ತ್ ಡೇ ಸಿಡಿಪಿಯೊಂದು ತಯಾರಾಗಿದ್ದು, ಇದನ್ನು ನಾಳೆ ಭಾರತ ಕಂಡ ಶ್ರೇಷ್ಠ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಬಿಡುಗಡೆ ಮಾಡಲಿದ್ದಾರೆ.
ನಾಳೆ ಸಂಜೆ 6.30 ಕ್ಕೆ ಅನಿಲ್ ಕುಂಬ್ಳೆ, ಸುದೀಪ್ ಬರ್ತ್ ಡೇ ಸಿಡಿಪಿ ಅನಾವರಣಗೊಳಿಸಲಿದ್ದಾರೆ. ಸೆಪ್ಟೆಂಬರ್ 2 ಕ್ಕೆ ಸುದೀಪ್ ಬರ್ತ್ ಡೇ ಇದ್ದು, ಈಗಲೇ ಅಭಿಮಾನಿಗಳಿಂದ ಹಬ್ಬ ಆಚರಿಸಲು ತಯಾರಿ ಶುರುವಾಗಿದೆ.