ಬೆಂಗಳೂರು: ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದ ದಿನ ಸ್ಯಾಂಡಲ್ ವುಡ್ ಕೂಡಾ ಚಟುವಟಿಕೆಯ ಗೂಡಾಗುತ್ತದೆ. ಹೊಸ ಸಿನಿಮಾಗಳು ಸೆಟ್ಟೇರುತ್ತವೆ. ಆದರೆ ಈ ಬಾರಿ ಎಲ್ಲವೂ ನೀರಸವಾಗಿದೆ.
ಕೊರೋನಾ ನಿರ್ಬಂಧದಿಂದಾಗಿ ಚಿತ್ರಮಂದಿರಗಳಿಗೆ ಶೇ.100 ರಷ್ಟು ತೆರೆಯಲು ಅನುಮತಿಯಿಲ್ಲ. ಹೀಗಾಗಿ ಎರಡು ವರ್ಷಗಳಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಉಳಿದಿದೆ. ಚಿತ್ರರಂಗ ನಷ್ಟದಲ್ಲಿದೆ.
ಹೀಗಾಗಿ ಹೊಸ ಸಿನಿಮಾಗಳು ಸೆಟ್ಟರುತ್ತಿಲ್ಲ. ಈ ಬಾರಿ ಯಾವುದೇ ಹೊಸ ಸಿನಿಮಾದ ಮುಹೂರ್ತ, ರಿಲೀಸ್ ಇಲ್ಲದೇ ನೀರಸವಾಗಿ ಸ್ಯಾಂಡಲ್ ವುಡ್ ವರಮಹಾಲಕ್ಷ್ಮಿ ಹಬ್ಬವನ್ನು ಬರಮಾಡಿಕೊಳ್ಳಲಿದೆ. ಕೇವಲ ಸಾಮಾಜಿಕ ಜಾಲತಾಣದ ಮೂಲಕ ಟೀಸರ್, ಟ್ರೈಲರ್, ಹಾಡುಗಳ ಬಿಡುಗಡೆಗೆ ಈ ಹಬ್ಬ ಸೀಮಿತವಾಗಿದೆ.