ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನಿರ್ದೇಶನದ 'ನವಮಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಸಕಲೇಶಪುರ, ಮೈಮಾಪುರ, ತುಮಕೂರು, ದೇವರಾಯನದುರ್ಗ ಮುಂತಾದ ಕಡೆ ನಲವತ್ತು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರ ಕಾರ್ಯಗಳು ಬಿರುಸಿನಿಂದ ಸಾಗಿದೆ. ಯಶಸ್ ಅಭಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಯಶಸ್ ಅಭಿ ಬರೆದಿದ್ದಾರೆ. ಸಂಭಾಷಣೆ ಕೃಷ್ಣ ಗುಡ್ಡೆಮಾರನಹಳ್ಳಿ ಹಾಗೂ ಯಶಸ್ ಅಭಿ ಅವರದು.
ಯಶಸ್ ಅಭಿ ಈ ಹಿಂದೆ 'ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಲ್ಲಿ ನಟಿಸಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿ. ನಿರ್ದೇಶಕ ಎಸ್ ನಾರಾಯಣ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಓಂಪ್ರಕಾಶ್ ರಾವ್, ಹುಚ್ಚ ವೆಂಕಟ್, ಶಂಕರ್ ಅಶ್ವಥ್, ಕುರಿ ಸುನೀಲ್, ನೇಹಾ ಪಾಟೀಲ್, ಕಾರ್ತಿಕ್, ಪವಿತ್ರ, ಅನುಶ್ರೀ, ಸಂದೀಪ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.
ಪದ್ಮಸುಂದರಿ ಕ್ರಿ
ಯೇಷನ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ಮನೀಶ್ ದಿನಕರ್ ಗಿರಿಧರ್ ದಿವಾನ್ ಅವರಿಗೆ ಸಹಾಯ ಮಾಡಿದ್ದಾರೆ. ಪ್ರದೀಪ್ ಕುಮಾರ್ ಹೆಚ್ ಎಸ್ ಛಾಯಾಗ್ರಹಣ, ಜಾಗ್ವಾರ್ ಸಣ್ಣಪ್ಪ ಸಾಹಸ ನಿರ್ದೇಶನ ಹಾಗೂ ನಾಗಿ, ಅರುಣ್ ಅವರ ನೃತ್ಯ ನಿರ್ದೇಶನ ಈ ಚಿತ್ರದಲ್ಲಿದೆ.