Select Your Language

Notifications

webdunia
webdunia
webdunia
webdunia

ಬಂದೂಕು ಹಿಡಿದು ಹೆದರಿಸುತ್ತಿದ್ದಾರೆ: ಈಶ್ವರ್ ಖಂಡ್ರೆ ಕಿಡಿ

ಬಂದೂಕು ಹಿಡಿದು ಹೆದರಿಸುತ್ತಿದ್ದಾರೆ: ಈಶ್ವರ್ ಖಂಡ್ರೆ ಕಿಡಿ
bengaluru , ಗುರುವಾರ, 19 ಆಗಸ್ಟ್ 2021 (14:51 IST)
ಈ ಹಿಂದೆ ಬಡಿಗೆ ಹಿಡಿದುಕೊಂಡು ತಿರುಗಾಡ್ತಾ ಇದ್ದೋರು
ಇದೀಗ ಬಂದೂಕಿನಿಂದ ಜನರನ್ನ ಹೆದರಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ವಿರುಧ್ದ ಹರಿಹಾಯ್ದಿದ್ದಾರೆ
ಕಲಬುಗರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ಶ್ರೀಮಂತ ಇತಿಹಾಸದ ರಾಜ್ಯ ಆದರೆ ಹೀಗೆ ಬಂದೂಕು ಹಿಡಿದು ಮೆರವಣಿಗೆ ಮಾಡಿಕೊಳ್ಳೋದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೋವಿಡ್ ನಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಸಾವನ್ನಪ್ಪಿದ್ದಾರೆ ಸಹಸ್ರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಇಂಥದ್ರಲ್ಲಿ ಜನಾಶೀರ್ವಾದ ಯಾತ್ರೆ ನೆಪದಲ್ಲಿ ಇಂಥ ಸ್ವಾಗತ ಸಂಭ್ರಮಗಳು ಬೇಕೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಪ್ರಶ್ನಿಸಿದರು.
ಯಾದಗಿರಿಯಲ್ಲಿ ನಡೆದ ಬಂದುಕಿನ ಫಾಯರಿಂಗ್ ನಲ್ಲಿ ಯ್ಯಾರಿಗಾದ್ರು ಗುಂಡು ತಗುಲಿದ್ರೆ ಯ್ಯಾರು ಜವಾಬ್ದಾರರಾಗ್ತಾ ಇದ್ದರು? ಅಂಥ ಯಾತ್ರೆಯಲ್ಲಿ ಬಂದೂಕನ್ನ ತರಲು ಪರವಾನಿಗೆ ನೀಡಿದ್ದಾದರೂ ಯಾರು? ಆ ಬಂದೂಕುಗಳಿಗೆ ಪರವಾನಿಗೆ ಇದೆಯಾ ಎಂದು ಖಂಡ್ರ ಪ್ರಶ್ನಿಸಿದರು.
ಇದೆಲ್ಲವನ್ನ ನೋಡಿದ್ರೆ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಸತ್ತುಹೋಗಿದೆ ಅನಿಸ್ತದೆ ಕೂಡಲೆ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮೇಲೆ ಕಣ್ಣು ಹಾಕಬೇಡ ಅಂದಿದ್ದಕ್ಕೆ ಸೋದರರಿಂದ ಬರ್ಬರ ಹತ್ಯೆ