Select Your Language

Notifications

webdunia
webdunia
webdunia
Wednesday, 9 April 2025
webdunia

ಪತ್ನಿ ಮೇಲೆ ಕಣ್ಣು ಹಾಕಬೇಡ ಅಂದಿದ್ದಕ್ಕೆ ಸೋದರರಿಂದ ಬರ್ಬರ ಹತ್ಯೆ

bengaluru
bengaluru , ಗುರುವಾರ, 19 ಆಗಸ್ಟ್ 2021 (14:48 IST)
ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದೂ ಅಲ್ಲದೇ ಎಚ್ಚರಿಕೆ ನೀಡಿದ್ದಕ್ಕಾಗಿ ಆತನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಭೀಕರ ಘಟನೆ
ಬೆಂಗಳೂರಿನಲ್ಲಿ ನಡೆದಿದೆ.
ಜೆಜೆ ನಗರದ ರೈಲ್ವೆ ಟ್ರ್ಯಾಕ್ ಬಳಿ ಹತ್ಯೆ ಮಾಡಲಾಗಿದ್ದು, ಪಾದರಾಯನಪುರ ನಿವಾಸಿ ಸಾದಿಲ್ ಪಾಷಾ (40) ಹತ್ಯೆಗೊಳಗಾದ ವ್ಯಕ್ತಿ. ಅರ್ಬಾಜ್ ಪಾಷಾ ಮತ್ತು ಸಹೋದರ ಇಬ್ಬರು ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಸಾದಿಲ್ ಪಾದರಾಯನಪುರದ ಮನೆಯ ಸಮೀಪ ಗ್ಯಾರೇಜ್ ಇಟ್ಟುಕೊಂಡಿದ್ದು, ಅರ್ಬಾಜ್ ಪಾಷಾ ಆತನ ಪತ್ನಿಯ ಮೇಲೆ ಕಣ್ಣು ಹಾಕಿದ್ದು ಸಲುಗೆ ಬೆಳೆಸಿಕೊಂಡಿದ್ದ. ಇದನ್ನು ಗಮನಿಸಿದ ಸಾದಿಲ್ ಕರೆದು ಎಚ್ಚರಿಕೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಸಾದಿಲ್ ಹತ್ಯೆಗೆ ಸೋದರದ ಜೊತೆಗೂಡಿ ಅರ್ಬಾಜ್ ಪ್ಲಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂತ್ರಾಲಯದಲ್ಲಿ ಆಗಸ್ಟ್ 21ರಿಂದ ಆರಾಧನಾ ಮಹೋತ್ಸವ!