ಶ್ರೀ ರಾಘವೇಂದ್ರ ಸ್ವಾಮಿಯ 35
0ನೇ ಆರಾಧನಾ ಮಹೋತ್ಸವವನ್ನು ಮಂತ್ರಾಲಯದಲ್ಲಿ ಆಗಸ್ಟ್ 21 ರಿಂದ 27ವರೆಗೆ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾದೆ.
ಈ ವೇಳೆ ಕೋವಿಡ್ 19 ನಿಂದ ಸಾರ್ವಜನಿಕರರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ನಿಯಮದಂತೆ ಆರಾಧನಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ.
ರಾಯರ ಆರಾಧನಾ ಮಹೋತ್ಸವದ ವೇಳೆ ಸ್ಯಾನಿಟೈಜರ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ ರಾಯರ ದರ್ಶನಕ್ಕೆ ಬರುವ ಭಕ್ತಾದಿಗಳಿಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜೀಕ ಅಂತರ ಕಾಪಾಡಲು ಶ್ರೀಮಠದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಶ್ರೀಮಠದ ಆವರಣದಲ್ಲಿ ಆ್ಯಂಬುಲೇನ್ಸ್ ಹಾಗೂ ಕ್ಲಿನಿಕ್ ಇರಲಿದ್ದು, ಶ್ರೀಮಠಕ್ಕೆ ಬರುವ ಭಕ್ತರಿಗೆ ತೊಂದರೆ ಆಗದಂತೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.
ತುಂಗಭದ್ರಾ ನದಿ ತೀರದಲ್ಲಿ ಸ್ನಾನಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ವಾಹನಗಳ ಪಾರ್ಕಿಂಗ್ ಗಾಗಿ ವಿಶೇಷ ಸ್ಥಳ ಗುರುತಿಸಲಾಗಿದೆ. ಇನ್ನು, ಶ್ರೀ ಮಠಕ್ಕೆ ಬರುವ ಭಕ್ತರಿಗೆ ಊಟ ಮತ್ತು ಪ್ರಸಾದ ವ್ಯವಸ್ಥೆ ಇರಲಿದೆ ಪರಿಮಳ ಪ್ರಸಾದ ಕೌಂಟರ್ ಗಳು ತೆರೆಯಲಾಗಿದೆ. ಒಟ್ಟಾರೆಯಾಗಿ ಕೋವಿಡ್ ನಿಯಮದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.