Publish Date: Wed, 18 Aug 2021 (11:19 IST)
Updated Date: Wed, 18 Aug 2021 (11:21 IST)
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಮುಖ ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ನೋಟಿಸ್ ನೀಡಿದೆ.
ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಐಡೆಂಟಿಟಿ ರಿವೀಲ್ ಮಾಡುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ರಾಹುಲ್ ಗೆ ಫೇಸ್ ಬುಕ್ ನೋಟಿಸ್ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರ ಪರಿಚಯ ಬಹಿರಂಗಪಡಿಸುವುದು ನಿಯಮಗಳಿಗೆ ವಿರುದ್ಧವಾಗಿದೆ. ಆದರೆ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ್ದ ರಾಹುಲ್ ಅವರ ಫೋಟೋ ಬಹಿರಂಗಪಡಿಸಿದ್ದರು. ಇದೀಗ ಆ ಪೋಸ್ಟ್ ರಿಮೂವ್ ಮಾಡಲು ರಾಹುಲ್ ಗಾಂಧಿಗೆ ಫೇಸ್ ಬುಕ್ ನೋಟಿಸ್ ನೀಡಿದೆ.