Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಣದೀಪ್‌ಸಿಂಗ್ ಸುರ್ಜೇವಾಲಾ ಗಂಭೀರ ಆರೋಪಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಣದೀಪ್‌ಸಿಂಗ್ ಸುರ್ಜೇವಾಲಾ ಗಂಭೀರ ಆರೋಪಿ
bangalore , ಮಂಗಳವಾರ, 17 ಆಗಸ್ಟ್ 2021 (21:25 IST)
ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಣದೀಪ್‌ಸಿಂಗ್ ಸುರ್ಜೇವಾಲಾ ಗಂಭೀರವಾಗಿ ಆರೋಪಿಸಿದ್ದಾರೆ.  ನಗರದ ಖಾಸಗಿ ಹೊಟೇಲ್‌‌ನಲ್ಲಿ ಆಯೋಜಿಸಿದ ಕಲಬುರಗಿ ವಿಭಾಗೀಯ ಮಟ್ಟದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗೀನ ಬಿಜೆಪಿ ಅಭಿವೃದ್ದಿ ವಿಚಾರದಲ್ಲಿ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಈ ಭಾಗದಲ್ಲಿ ಕೇವಲ 3 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಅಭಿವೃದ್ದಿ ಕಲ್ಯಾಣ ಮಾಡುವ ಉದ್ದೇಶ ಬಿಜೆಪಿಗಿಲ್ಲವಾಗಿದೆ.  ಈ ಭಾಗಕ್ಕೆ 1500 ಕೋಟಿ ನೀಡುವುದಾಗಿ ಹೇಳಿ  KKRDB  ಗೆ ಮಂಜೂರು 630 ಕೋಟಿ ಬಿಡುಗಡೆ ಮಾಡಿದೆ‌. ಈ 630 ಕೋಟಿ ಮೊತ್ತದ ಅನುದಾನದಲ್ಲಿ ಏನು ಅಭಿವೃದ್ದಿ ನಿರೀಕ್ಷೆ ಮಾಡಲು ಸಾಧ್ಯ. ಕೋವಿಡ್ ಸಮಯದಲ್ಲಿ ಸಕಾಲಕ್ಕೆ ರವಾನಿಸಿಲ್ಲ. ಇದರಿಂದಾಗಿ ರೆಮಿಡಿಷನ್ ಇಂಜಕ್ಷನ್ 25,000 ರೂಪಾಯಿವರೆಗೆ ಮಾರಾಟ ಮಾಡಲಾಗಿದೆ. ರೋಗಿಗಳ ಚಿಕಿತ್ಸೆಗೆ  ಐಸಿಯು ಬೆಡ್ ಅವಶ್ಯಕತೆಯಿತ್ತು. ಆದ್ರೆ ಐಸಿಯು ಬೆಡ್‌ಗಳ ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ  ರೋಗಿಗಳು ಪರದಾಡಿದ್ದರು. ಕೋವಿಡ್ ಮೃತಪಟ್ಟವರಿಗೆ ಪ್ರಮಾಣ ಪತ್ರವನ್ನ ಒದಗಿಸಬೇಕು. ಆದ್ರೆ ಸಾವಿನ ಪ್ರಮಾಣ ಪತ್ರ ಸಂಬಂಧಿಕರಿಗೆ ಸಹ ನೀಡಲಾಗುತ್ತಿಲ್ಲವೆಂದು ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ರು. ಪ್ರಧಾನಿ ನರೇಂದ್ರ ಮೋದಿ ತೊಗರಿ ಬೆಳೆಗಾರರ ಕಾಳಜಿಯಿಲ್ಲದೆ ಗದಾ ಪ್ರಹಾರ ನಡೆಸಿದ್ದು, ತೊಗರಿ ಬೆಳೆಗಾರಿಗೆ ಬೆಂಬಲ ಬೆಲೆ ಇದುವರೆಗೂ ಪಾವತಿಯಾಗಿಲ್ಲ. ತೊಗರಿ ಬೆಳೆ ಆಮದು ಸಹ ರದ್ದು ಮಾಡಲಾಗಿದ್ದು, ಇದಕ್ಕಿಂತ ದೊಡ್ಡ ವಿಶ್ವಾದ್ರೋಹ ಮೋಸ ದೊಡ್ಡದಿಲ್ಲ ಎಂದರು. 62 ಕೋಟಿ ರೈತರು ಬೀದಿಗೆ ಬಿದ್ದಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ರೈತರ ಜಮೀನು ಮಾರಾಟ ಮಾಡುವ ಸಂಚು ನಡೆಯುತ್ತಿದೆ. 
371(j)  ತಿದ್ದುಪಡಿ ಮಾಡಲಾಗಿತ್ತು. ಆದ್ದರಿಂದ ಸರ್ಕಾರಿ ನೇಮಕಾತಿ ನಿಲ್ಲಿಸಲಾಗಿದೆ. ಹಿಂದೆ ಪ್ರವಾಹ ಬಂದಾಗ 1500 ಕೋಟಿ ಪರಿಹಾರ ನೀಡಿದ್ದರು. ರಾಜ್ಯದಲ್ಲಿ ಜನರ ಓಟಿನಿಂದ ಬಂದ ಸರ್ಕಾರವಲ್ಲ. ಬಿಎಸವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ‌. ಬಿಎಸ್‌ವೈ ಮೇಲೆ ಭ್ರಷ್ಟಾಚಾರ ಆರೋಪವಿತ್ತಾ.. ಅಥವಾ ಇಡಿ ಒತ್ತಡ ಹೇರಲಾಗಿತ್ತಾ. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ.  ಹೀಗಾಗಿ ಈ ಸರ್ಕಾರ ಅನೈತಿಕ ಸರ್ಕಾರವಾಗಿದೆ ಎಂದರು. ಇಂದು ನಡೆದ ಸಭೆ ಕಾಂಗ್ರೆಸ್ ಸಂಘಟನೆ ಬಲ ಪಡಿಸಲು  ಸಭೆ ನಡೆಸಲಾಗಿದೆ‌. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಪಕ್ಷ ಬಲಗೊಳಿಸುವ ಉದ್ದೇಶ. ಪಕ್ಷ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದ್ರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್‌.ಆರ್.ಪಾಟೀಲ್, ಬಿ.ವಿ.ನಾಯಕ್, ಎನ್.ಎಸ್.ಬೋಸರಾಜ್, ಹೆಚ್.ಮುನಿಯಪ್ಪ ಸೇರಿದಂತೆ ಇತರಿದ್ದರು. 




Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಿನಿಂದ ಜಜ್ಜಿ ಗೃಹಿಣಿಯ ಭೀಕರ ಕೊಲೆ