Select Your Language

Notifications

webdunia
webdunia
webdunia
webdunia

ಕಲ್ಲಿನಿಂದ ಜಜ್ಜಿ ಗೃಹಿಣಿಯ ಭೀಕರ ಕೊಲೆ

Horrific murder of a housewife by a stone
nelamagala , ಮಂಗಳವಾರ, 17 ಆಗಸ್ಟ್ 2021 (21:20 IST)
ಕಲ್ಲಿನಿಂದ ಜಜ್ಜಿ ಗೃಹಿಣಿಯ ಭೀಕರ ಕೊಲೆ ನಡೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ವಾದಕುಂಟೆ ಗ್ರಾಮದ ಬಳಿ ಕೃತ್ಯ ನಡೆದಿದ್ದು, ಭಾಗ್ಯಮ್ಮ (30) ಕೊಲೆಯಾದ ಗೃಹಿಣಿಯಾಗಿದ್ದಾರೆ.ಮಾಂಗಲ್ಯ ಸರ ಕಸಿದು ಆರೋಪಿಗಳು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು,ಸರಗಳ್ಳರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ, ಕಲ್ಲಿನಿಂದ ಭೀಕರವಾಗಿ ಮಹಿಳೆಯನ್ನು ಜಜ್ಜಿ ಚಿನ್ನದ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಶಂಕೆಗೆ ಪುಷ್ಟಿ ನೀಡಿದೆ.ವಾದಕುಂಟೆ ಗೂಳಾಪುರ ರಸ್ತೆಯ ಕೃತ್ಯ ನಡೆಯುತ್ತಿದ್ದಂತೆ
ಸ್ಥಳಕ್ಕೆ ತ್ಯಾಮಗೊಂಡ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಇತ್ತ ಸ್ಥಳಕ್ಕೆ ಸರ್ಕಲ್ ಇನ್ಸಪೆಕ್ಟರ್ ಹರೀಶ್, ತ್ಯಾಮಗೊಂಡ್ಲು ಠಾಣಾ ಪಿಎಸ್ಐ ಚಿಕ್ಕನರಸಿಂಹಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆ ಮಾಡಿಕೊಂಡ ದಂಪತಿಗೆ ಕೋವಿಡ್ ನೆಗೆಟಿವ್!