Select Your Language

Notifications

webdunia
webdunia
webdunia
webdunia

ಬಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಬಸ್ ದರ ಏರಿಕೆ ಖಂಡಿಸಿ ಪ್ರತಿಭಟನೆ
bengaluru , ಗುರುವಾರ, 19 ಆಗಸ್ಟ್ 2021 (15:47 IST)
ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ವಿರೋಧಿಸಿ, ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಜಾತ್ಯಾತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತ್ರತ್ವದಲ್ಲಿ‌ ಮಂಗಳೂರು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಪಕ್ಷಗಳ ಹಾಗೂ ಸಂಘಟನೆಗಳ ಕಾರ್ಯಕರ್ತರು, ಬಸ್ ಮಾಲಕರ ದುರ್ವರ್ತನೆ ಹಾಗೂ ಜನವಿರೋಧಿಯಾಗಿ ವರ್ತಿಸುತ್ತಿರುವ ಜಿಲ್ಲಾಡಳಿತದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಕಾಂಗ್ರೆಸ್ ಜಿಲ್ಲಾ ವಕ್ತಾರರಾದ ಅಭಿಷೇಕ್ ಉಳ್ಳಾಲ್,  ಸಿಪಿಐ ಜಿಲ್ಲಾ ನಾಯಕರಾದ ಸೀತಾರಾಮ ಬೇರಿಂಜರವರು ಮಾತನಾಡಿದರು.
ಸಿಪಿಎಂ ನಾಯಕರಾದ ಸುನಿಲ್ ಕುಮಾರ್ ಬಜಾಲ್ , ಡಿವೈಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಲಿತ ಸಂಘಟನೆಯ ಹಿರಿಯ ನಾಯಕರಾದ ಎಂ.ದೇವದಾಸ್, JDS ನಾಯಕರಾದ ಸುಮತಿ ಎಸ್ ಹೆಗ್ಡೆ ಯವರು ಮಾತನಾಡಿ,ಏರಿಸಿದ ದರವನ್ನು ಕೂಡಲೇ ತಡೆಹಿಡಿದು ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಿಎಪಿಂಎ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್,ಮುನೀರ್ ಕಾಟಿಪಳ್ಳ, ಜಯಂತಿ ಶೆಟ್ಟಿ, ದಯಾನಂದ ಶೆಟ್ಟಿ,ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ್,ನೀರಜ್ ಪಾಲ್, ಮಹಮ್ಮದ್ ಕುಂಜತ್ತಬೈಲ್, ಭರತೇಶ್ ಅಮೀನ್, ಹೊನ್ನಯ್ಯ,ಯಶವಂತ ಪ್ರಭು,ಉದಯ ಕುಂದರ್, ರೋಬಿನ್ ಪ್ರೀತಂ,ದುರ್ಗಾ ಪ್ರಸಾದ್, ಸಿಪಿಐ ನಾಯಕರಾದ ವಿ.ಕುಕ್ಯಾನ್,ಬಿ.ಶೇಖರ್, ಕರುಣಾಕರ್, ಜಗತ್ಪಾಲ್, ಪುಷ್ಪಾರಾಜ್ ಬೋಳೂರು, ಜೆಡಿಎಸ್ ನಾಯಕರಾದ ಅಲ್ತಾಫ್ ತುಂಬೆ,ಹರ್ಷಿತಾ,ಶಾರದಾ, ಚೂಡಾಮಣಿ,ಲತೀಫ್, ರಿಯಾಜ್,ದಲಿತ ಸಂಘಟನೆಗಳ ಮುಖಂಡರಾದ ತಿಮ್ಮಯ್ಯ ಕೊಂಚಾಡಿ,ರಘು ಎಕ್ಕಾರು, ಕ್ರಷ್ಣ ತಣ್ಣೀರುಬಾವಿ,ವಿಶು ಕುಮಾರ್, ರಘುವೀರ್, ಡಿವೈಎಫ್ ಐ ನಾಯಕರಾದ ನೌಷಾದ್ ಬೆಂಗರೆ,ಅನಿಲ್ ಡಿಸೋಜ, ಮಹಿಳಾ ಸಂಘಟನೆಗಳ ಮುಖಂಡರಾದ ರೇಣುಕಾ, ಪದ್ಮಾವತಿ, ಭಾರತಿ ಬೋಳಾರ, ಜಯಲಕ್ಷ್ಮಿ ಜಪ್ಪಿನಮೊಗರು, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್ ಮುಂತಾದವರು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

2 ಡೋಸ್ ಪಡೆದ 87,000 ಭಾರತೀಯರಿಗೆ ಕೊರೊನಾ ಸೋಂಕು!