Select Your Language

Notifications

webdunia
webdunia
webdunia
webdunia

19 ಕಿ.ಮೀ ಪಾದಚಾರಿ ಮಾರ್ಗ ಒತ್ತುವರಿ ತೆರವು

19 km footpath acquire in bengalore
bangalore , ಭಾನುವಾರ, 8 ಆಗಸ್ಟ್ 2021 (21:29 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯದಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಒಟ್ಟು 19.05ಕೀ.ಮೀ ವ್ಯಾಪ್ತಿಯಲ್ಲಿ 134 ಅನಧಿಕೃತ ತಾತ್ಕಲಿಕ ಮತ್ತು ಶಾಶ್ವತ ಪಾದಚಾರಿ ರಸ್ತೆ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಮಾನ್ಯ ಉಚ್ಚ ನ್ಯಾಯಲಯದ ಆದೇಶ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ನಿರ್ದೇಶನದಂತೆ ಮಹದೇವಪುರ ವಲಯ ಸಹಾಯಕ ಕಾರ್ಯಪಾಲಕ ಅಭಿಯಂತರರು ನೇತೃತ್ವದಲ್ಲಿ ವಾರ್ಡ್ ಮಟ್ಟದ ಸಹಾಯಕ ಅಭಿಯಂತರವರ ಸಹಯೋಗದೊಂದಿಗೆ: ಕಾರ್ಯಾಚರಣೆಯಲ್ಲಿ ಹೂಡಿ ಉಪ ವಿಭಾಗ, ವೈಟ್ ಫೀಲ್ಡ್ ಉಪ ವಿಭಾಗ,  ಮಾರತ್ತ್ ಹಳ್ಳಿ ಉಪ ವಿಭಾಗ, ಹೆಚ್ ಎ ಲ್ ಉಪ ವಿಭಾಗ, ಕೆ.ಆರ್ ಪುರ ಉಪ ವಿಭಾಗ ಮತ್ತು ಹೊರಮಾವು ಉಪ ವಿಭಾಗದಲ್ಲಿ ಬರುವ ವಿವಿಧ ವಾರ್ಡ್ ಗಳಲ್ಲಿ ಒಟ್ಟು 134 ಅನಧಿಕೃತ ತಾತ್ಕಲಿಕ ಮತ್ತು ಶಾಶ್ವತ ಪಾದಚಾರಿ ರಸ್ತೆ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಅನದಿಕೃತ ತಾತ್ಕಲಿಕ ಮತ್ತು ಶಾಶ್ವತ ಪಾದಚಾರಿ ರಸ್ತೆ ಒತ್ತುವರಿಗಳನ್ನು ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ತೆರವು ಗೊಳಿಸಲಾಯಿತು.
ಮುಂದುವರೆದು ಬರುವ ದಿನಗಳಲ್ಲಿ ಇಂತಹ ಯಾವುದೇ ಅನದಿಕೃತ ತಾತ್ಕಲಿಕ ಮತ್ತು ಶಾಶ್ವತ ಪಾದಚಾರಿ ರಸ್ತೆ ಒತ್ತುವರಿ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹಾಗು ಎಚ್ಚರಿಕೆ ನಿಟ್ಟಿನಲ್ಲಿ ಸೂಚನಾ ಫಲಕ ಅಡವಳಿಸಲಾಗುವುದು ಎಂದು ಮಹದೇವಪುರ ವಲಯದ ಮುಖ್ಯ ಅಭಿಯಂತರರಾದ ಶ್ರೀ.ಆರ್.ಎಲ್.ಪರಮೇಶ್ವರಯ್ಯರವರು

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ 2 ದಿನ ಪೂರೈಸಿದ ರಾತ್ರಿ ಕರ್ಪ್ಯೂ