Select Your Language

Notifications

webdunia
webdunia
webdunia
webdunia

ವೃಷಭಾವತಿ ನದಿಗೆ ಆಯತಪ್ಪಿ ಬಿದ್ದ ವಾಕಿಂಗ್ ಗೆ ಹೋಗಿದ್ದ ಯುವಕ!

A young man walking to the river Tauruspati
bangalore , ಭಾನುವಾರ, 8 ಆಗಸ್ಟ್ 2021 (21:15 IST)
ವೃಷಭಾವತಿ ನದಿಗೆ ಆಯ ತಪ್ಪಿ ಬಿದ್ದ ಯುವಕ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ಚೌಕಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಕೌಶಿಕ್ ರೆಡ್ಡಿ (26) ನೀರಿನಲ್ಲಿ ಕೊಚ್ಚಿ ಹೋದ ಯುವಕ. 
ಶನಿವಾರ ಸಂಜೆ ಈ ಘಟನೆ ನಡೆದಿದ್ದು, ವಾಕಿಂಗ್ ಮುಗಿಸಿಕೊಂಡು ಬಂದು ಸೇತುವೆ ಮೇಲೆ ಕುಳಿತುಕೊಳ್ಳುವಾಗ ಕೌಶಿಕ್ ಆಯತಪ್ಪಿ ನದಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕೆಲವೆಡೆ ಶನಿವಾರ ರಾತ್ರಿ ಭಾರಿ ಮಳೆ ಸುರಿದ ಪರಿಣಾಮ ವೃಷಭಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಯುವಕ ಕೊಚ್ಚಿ ಹೋಗಿರುವ ಶಂಕೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಶಾಸಕ ರಾಮದಾಸ್ ಗೆ ಮತ್ತೆ ಸಂಕಷ್ಟ