Select Your Language

Notifications

webdunia
webdunia
webdunia
webdunia

ಮೈಸೂರು ಶಾಸಕ ರಾಮದಾಸ್ ಗೆ ಮತ್ತೆ ಸಂಕಷ್ಟ

ಮೈಸೂರು ಶಾಸಕ ರಾಮದಾಸ್ ಗೆ ಮತ್ತೆ ಸಂಕಷ್ಟ
mysore , ಭಾನುವಾರ, 8 ಆಗಸ್ಟ್ 2021 (21:09 IST)
ಮಳಲವಾಡಿ ಭೂ ಹಗರಣ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದೆ. ಈ ಮೂಲಕ ಮೈಸೂರು ಶಾಸಕ ಎಸ್.ಎ. ರಾಮದಾಸ್ ಗೆ ಮತ್ತೆ ಸಂಕಷ್ಟ ಶುರುವಾಗಿದೆ.
2008ರಲ್ಲಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಭೂ ಹಗರಣ ಸಂಬಂಧ ರಾಮದಾಸ್ ವಿರುದ್ಧ ದಾಖಲಾಗಿದ್ದ ಪ್ರಕರಣ ಕುರಿತು ಪೊಲೀಸರು ಬಿ ವರದಿ ಸಲ್ಲಿಸಿದ್ದರು. ಪೊಲೀಸರ ವರದಿಯನ್ನು ಕೆಳ ನ್ಯಾಯಾಲಯ ಪುರಸ್ಕರಿಸಿತ್ತು.
ಕೆಳ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಮೇಲ್ಮನವಿ ಸಲ್ಲಿಸಿದ್ದು, ಅಷ್ಟರಲ್ಲೇ ರಾಮದಾಸ್ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಭೂಹರಣದ ಬಗ್ಗೆ ತನಿಖೆ ನಡೆಸಿ ರಾಮದಾಸ್ ವಿರುದ್ಧ ಅಂದಿನ ಮೈಸೂರು ಡಿಸಿ ತ.ಮ. ವಿಜಯಭಾಸ್ಕರ್ ವರದಿ ಸಲ್ಲಿಸಿದ್ದರು.
ಪ್ರಕರಣ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ವರ್ಗಾವಣೆಯಾಗಿದ್ದು, ಸೆಕ್ಷನ್ 420, 468 ಅಡಿ ಕೇಸ್ ದಾಖಲಿಸಲು 2019ರಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ವಿಶೇಷ ಕೋರ್ಟ್ ಆದೇಶಿಸಿತ್ತು. ವಿಶೇಷ ಕೋರ್ಟ್ ನ ಆದೇಶ ಪ್ರಶ್ನಿಸಿ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದ ರಾಮದಾಸ್ ತಂದಿದ್ದು, ಇತ್ತೀಚೆಗೆ ರಾಮದಾಸ್ ಅರ್ಜಿಯನ್ನು ವಜಾ ಮಾಡಿ, ತಡೆಯಾಜ್ಞೆ ತೆರವು ಮಾಡಿದ್ದ ಹೈಕೋರ್ಟ್, ಮತ್ತೆ ವಿಚಾರಣೆ ಮುಂದುವರಿಸಲು ನಿರ್ಧರಿಸಿದ್ದು, ಶಾಸಕ ರಾಮದಾಸ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲು ಸೂಚನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 39,070 ಕೊರೊನಾ ಸೋಂಕು ದೃಢ; 491 ಸೋಂಕಿತರು ಬಲಿ