Select Your Language

Notifications

webdunia
webdunia
webdunia
webdunia

ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಬಾಗಿಲು ತೆರೆದ ಪತ್ನಿಗೆ ಶಾಕ್!

webdunia
mysore , ಗುರುವಾರ, 5 ಆಗಸ್ಟ್ 2021 (20:56 IST)
ಮೈಸೂರು: ಪ್ರಾಧ್ಯಾಪಕನಿಂದಲೇ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಚಾರಕ್ಕೆ ಯತ್ನಿಸುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಾಮಚಂದ್ರ ವಿರುದ್ಧ ಸಂತ್ರಸ್ತೆಯಿಂದ ಜಯಲಕ್ಷ್ಮಿಪುರಂ ಠಾಣೆಗೆ ದೂರು ನೀಡಿದ್ದು, ಪ್ರಾಧ್ಯಾಪಕನ ಪತ್ನಿ ಲೋಲಾಕ್ಷಿ ಕೂಡ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿದ್ದು ಸಂತ್ರಸ್ತೆ ಬೆಂಬಲಕ್ಕೆ ನಿಂತಿದ್ದಾರೆ.
ಸಂತ್ರಸ್ತೆ ರಾಮಚಂದ್ರ ಬಳಿ ಸಂತ್ರಸ್ತೆ ಪಿಎಚ್‌ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ಮಾಹಿತಿ ಹಂಚಿಕೊಳ್ಳುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ರಾಮಚಂದ್ರ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಮನೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಹೊರಗೆ ಹೋಗಿದ್ದ ರಾಮಚಂದ್ರ ಪತ್ನಿ ಲೋಲಾಕ್ಷಿ ಇದೇ ವೇಳೆ ಮನೆಗೆ ಮರಳಿದ್ದು, ಒಳಗಿನಿಂದ ಕೂಗಾಟ, ಚೀರಾಟ ಕೇಳಿದ್ದರಿಂದ ಬಾಗಿಲು ತೆರೆದಿದ್ದಾರೆ. ಕೂಡಲೇ ಸಂತ್ರಸ್ತೆ, ಲೋಲಾಕ್ಷಿ ಅವರ ಕಾಲಿಗೆ ಬಿದ್ದು ರಕ್ಷಿಸುವಂತೆ ಬೇಡಿಕೊಂಡಿದ್ದಾಳೆ.
ಸಂತ್ರಸ್ತೆ ಯುವತಿಯನ್ನು ಹಾಗೂ ಪತಿಯನ್ನ ಠಾಣೆಗೆ ಕರೆತಂದ ಲೋಲಾಕ್ಷಿ ದೂರು ನೀಡಿದ್ದು, ಆರೋಪಿ ರಾಮಚಂದ್ರನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
rep

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ