Select Your Language

Notifications

webdunia
webdunia
webdunia
webdunia

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ!

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ!
ದೆಹಲಿ , ಮಂಗಳವಾರ, 3 ಆಗಸ್ಟ್ 2021 (08:39 IST)
ದೆಹಲಿ(ಆ.02): ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಯಾರೂ ಮರೆತಿಲ್ಲ. ಇದಾದ ಬಳಿಕ ಅದೆಷ್ಟೇ ಸುರಕ್ಷತೆ ಒದಗಿಸಿದರೂ, ಜಾಗೃತಿ ಮೂಡಿಸಿದರೂ ಅತ್ಯಾಚಾರ ಪ್ರಕರಣಗಳು ನಿಂತಿಲ್ಲ. ಇದೀಗ ದೆಹಲಿಯ ಕಂಟ್ಮೋನ್ಮೆಂಟ್ ಏರಿಯಾ ನಂಗಲ್ನಲ್ಲ ನಡೆದಿದೆ. 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಬಳಿಕ ಶವನ್ನು ಸ್ಮಶಾನದಲ್ಲಿ ಸುಟ್ಟುಹಾಕಿದ ಘಟನೆ ನಡೆದಿದೆ.

•ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ
•9 ವರ್ಷದ ಬಾಲಕಿ ಮೇಲೆ ರೇಪ್ & ಮರ್ಡರ್
•ಸ್ಮಶಾನದಲ್ಲಿರುವ ಗುರು ವಿರುದ್ಧ ದೂರು ದಾಖಲಿಸಿದ ಪೋಷಕರು
ನಂಗಲ್ನ ಸ್ಮಶಾನದ ಬಳಿ ವಾಸವಿರುವ 9ರ ಬಾಲಕಿ ಹಾಗೂ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಸಂಜೆ 6 ಗಂಟೆ ವೇಳೆ ಬಾಲಕಿ ಸ್ಮಶಾನದಲ್ಲಿ ಇಟ್ಟಿರುವ ರೆಫ್ರಿಜರೇಟರ್ನಲ್ಲಿ ತಣ್ಣನೆ ನೀರು ಕುಡಿಯಲು ತೆರಳಿದ್ದಾರೆ. ಆದರೆ ಎಷ್ಟು ಹೊತ್ತಾದರು ಬಾಲಕಿ ಮನೆಗೆ ಹಿಂತಿರುಗಿಲ್ಲ. ಆತಂಕ ಗೊಂಡ ಪೋಷಕರು ಹುಡುಕಾಟಕ್ಕೆ ಇಳಿದ್ದಾರೆ.
 ಈ ವೇಳೆ ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಸ್ಮಶಾನದಲ್ಲಿ ಅಂತಿ ವಿಧಿವಿಧಾನಗಳನ್ನು ನೇರವೇರಿಸಲು ನೇಮಕಗೊಂಡಿರುವ  ಗುರು ಬಾಲಕಿ ಪೋಷಕರನ್ನು ಕರೆಯಿಸಿದ್ದಾನೆ. ಬಳಿಕ ಬಾಲಕಿ ಮೃತ ದೇಹ ತೋರಿಸಿ, ತಕ್ಷಣವೇ ಸುಡಲು ಧಮ್ಕಿ ಹಾಕಿದ್ದಾನೆ. ಪೊಲೀಸರು ಬಂದರೆ ಮರಣೋತ್ತರ ಪರೀಕ್ಷೆ ಮಾಡಿ, ಅಂಗಾಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಮುಂದಿನ ಜನ್ಮದಲ್ಲಿ ಅಂಗಾಂಗ ವೈಕಲ್ಯ ಎದುರಾಗಲಿದೆ ಎಂದು ಬೆದರಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರನ್ನು ಬೆದರಿಸಿ ಸ್ಮಶಾನದ ಗುರು ಸ್ಮಶಾನದಲ್ಲೇ ಬಾಲಕಿ ಶವ ಸುಟ್ಟಿದ್ದಾನೆ. ಇತ್ತ ಪೋಷಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಿಮಿಸದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಶವ ಸುಟ್ಟ ಗುರು ಪರಾರಿಯಾಗಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನಂಗಲ್ ನಿವಾಸಿಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಇತ್ತ ಬಾಲಕಿಯನ್ನು ಕಳೆದುಕೊಂಡ ಪೋಷಕರ ಅಳಲು ಮುಗಿಲು ಮುಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದ.ಕ., ಉಡುಪಿ ಹಳ್ಳಿಗಳಲ್ಲಿ ಕೋವಿಡ್ ಸೋಂಕು ಉಲ್ಬಣ!