Select Your Language

Notifications

webdunia
webdunia
webdunia
webdunia

ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ
bangalore , ಸೋಮವಾರ, 2 ಆಗಸ್ಟ್ 2021 (18:22 IST)
ಹುಟ್ಟುಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು 16 ವರ್ಷದ ಬಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯ ಸಹಕಾರ ನಗರದಲ್ಲಿ ಭಾನುವಾರ ನಡೆದಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ಸಂಜೀವಪ್ಪ ಅವರ 16 ವರ್ಷದ ಪುತ್ರಿ ಮೃತಪ್ಟಟಿದ್ದಾಳೆ. ಸಂಜೀವಪ್ಪ ಕೆಲ ವರ್ಷಗಳ ಹಿಂದೆಯೇ ಪತ್ನಿ, ಮಕ್ಕಳ ಜತೆ ಬೆಂಗಳೂರಿಗೆ ಬಂದಿದ್ದು, ಸಹಕಾರ ನಗರದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಪುತ್ರಿ ನಾಗವೇಣಿ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆ.2ರಂದು ಆಕೆಯ ಹುಟ್ಟಹಬ್ಬವಿತ್ತು. ಹೀಗಾಗಿ ಕಳೆದ ಒಂದು ವಾರದಿಂದ ಹೊಸ ಬಟ್ಟೆ ಕೊಡಿಸುವಂತೆ ಪೆÇೀಷಕರಿಗೆ ಒತ್ತಾಯಿಸುತ್ತಿದ್ದಳು. ಆದರೆ ಪೆÇೀಷಕರು ತಲೆಕೆಡಿಸಿಕೊಂಡಿರಲಿಲ್ಲ. ಭಾನುವಾರ ಸಹ ಹೊಸ ಬಟ್ಟೆಗೆ ದುಂಬಾಲು ಬಿದ್ದಿದ್ದಳು. ಆದರೆ, ಪೆÇೀಷಕರು ಗಂಭೀರವಾಗಿ ಪರಿಗಣಿಸದೆ ಕೆಲಸಕ್ಕೆ ಹೋಗಿದ್ದಾರೆ. ಅದರಿಂದ ಬೇಸರಗೊಂಡ ಬಾಲಕಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮತ್ತೊಂದೆಡೆ ಘಟನೆಗೆ ಬಾಲಕಿ ದೂರದ ಸಂಬಂ„ ಯುವಕನನ್ನು ಪ್ರೀತಿಸುತ್ತಿದ್ದಳು. ಅದಕ್ಕೆ ಪೆÇೀಷಕರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸಲಿಲ್ಲ ಎಂದು ಬೇಸರಗೊಂಡಿದ್ದಳು ಎಂದು ಪೆÇೀಷಕರು ಮಾಹಿತಿ ನೀಡಿದ್ದಾರೆ ಎಂದು ಪೆÇಲೀಸರು ಮಾಹಿತಿ ನೀಡಿದರು. ಕೊಡಿಗೇಹಳ್ಳಿ ಪೆÇಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
sucide

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಅತೀ ಕಡಿಮೆ ಮೀನು ತಿನ್ನುವುದು ಈ ರಾಜ್ಯದ ಜನರಂತೆ..!