Select Your Language

Notifications

webdunia
webdunia
webdunia
webdunia

ಶಾಲೆ ಆರಂಭದ ವಿಚಾರದಲ್ಲಿ ಯೂಟರ್ನ್ ಹೊಡೆದ ಖಾಸಗಿ ಶಾಲೆಗಳ ಒಕ್ಕೂಟಗಳು

ಶಾಲೆ ಆರಂಭದ ವಿಚಾರದಲ್ಲಿ ಯೂಟರ್ನ್ ಹೊಡೆದ ಖಾಸಗಿ ಶಾಲೆಗಳ ಒಕ್ಕೂಟಗಳು
ಬೆಂಗಳೂರು , ಸೋಮವಾರ, 2 ಆಗಸ್ಟ್ 2021 (18:06 IST)
ಬೆಂಗಳೂರು: ಸರಕಾರ ಗ್ರೀನ್ ಸಿಗ್ನಲ್ ಕೊಡಲಿ ಬಿಡಲಿ ನಾವು ಮಾತ್ರ ಶಾಲೆ ಆರಂಭ ಮಾಡೇ ಮಾಡ್ತೀವಿ ಎಂದು ಖಾಸಗಿ ಒಕ್ಕೂಟಗಳು ಸರಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದವು. ಆದರೀಗ ಖಾಸಗಿ ಶಾಲಾ ಒಕ್ಕೂಟಗಳು ಈ ನಿರ್ಧಾರದಿಂದ ಯು ಟರ್ನ್ ಹೊಡೆದಿವೆ. ರುಪ್ಸಾ ಎಂಬ ಅನುದಾನರಹಿತ ಖಾಸಗಿ ಶಾಲಾ ಒಕ್ಕೂಟದ ಎರಡು ಬಣಗಳು ಅವರದೇ ಒತ್ತಾಯ, ಸಲಹೆಗಳನ್ನು ಸರ್ಕಾರಕ್ಕೆ ನೀಡುತ್ತಿವೆ.

ಕೊರೊನಾದಿಂದಾಗಿ ಕಳೆದ ವರುಷ ಶೈಕ್ಷಣಿಕ ಚಟುವಟಿಕೆಗಳೇ ಸಮರ್ಪಕವಾಗಿ ಆಗಿಲ್ಲ. ಈ ವರುಷವಾದ್ರೂ ಶಾಲೆಗಳು ತೆರೆಯುತ್ತವೆ ಎಂದುಕೊಂಡರೇ ಅದೂ ಕೂಡ ಅನುಮಾನ ಬರುತ್ತಿದೆ. ಇದಕ್ಕಾಗಿ ಸರ್ಕಾರ ನಿರ್ಧಾರ ಮಾಡದೇ ಹೋದ್ರೂ ಇದೇ ಆಗಸ್ಟ್ 2 ಕ್ಕೆ ಶಾಲೆ ಆರಂಭ ಮಾಡೇ ಮಾಡುತ್ತೇವೆ ಅಂತ ಹಠ ಮಾಡಿದ್ದ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟಗಳು ಈಗ ಮತ್ತೆ ತಮ್ಮ ನಿರ್ಧಾರ ಬದಲಿಸಿದೆ. ಒಂದು ಕಡೆ ಕೊರೊನ 3 ನೇ ಅಲೆ ಆತಂಕ ಜಾಸ್ತಿಯಾಗಿರುವ ಹಿನ್ನೆಲೆ ಹಾಗೂ ತಜ್ಞರು ಶಾಲೆ ಆರಂಭ ಸೇಫ್ ಇಲ್ಲ ಅಂತ ಹೇಳಿರುವ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತರು ಚರ್ಚೆಗೆ ಆಹ್ವಾನ ಮಾಡಿದ್ದಾರೆ. ಹೀಗಾಗಿ ಶಾಲೆ ಆರಂಭಕ್ಕೆ ಸರ್ಕಾರಕ್ಕೆ ಮತ್ತೊಂದು ವಾರದ ಗಡುವನ್ನು ರುಪ್ಸಾದ ಲೇಪಾಕ್ಷ ಬಣ ನೀಡಿದೆ.
ಮತ್ತೊಂದು ಕಡೆ ರುಪ್ಸಾದ ಲೋಕೇಶ್ ತಾಳಿಕಟ್ಟಿ ಬಣವು ಕೂಡ ಶಾಲೆಗಳ ಆರಂಭಕ್ಕೆ ಒತ್ತಾಯ ಮಾಡುತ್ತಿದೆ. ಆದರೆ ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ ಶಾಲೆ ಆರಂಭವಾಗೋದು ಅಷ್ಟು ಸುಲಭವಿಲ್ಲ. ಒಂದು ವಾರದ ಬಳಿಕ ಸರ್ಕಾರ ವಿದ್ಯಾಗಮ ಆರಂಭಕ್ಕೆ ಆದರೂ ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿ 40 ಲಕ್ಷ ಮಕ್ಕಳು ಓದುತಾ ಇದ್ದಾರೆ. ಆದ್ರೆ ಗ್ರಾಮೀಣ ಭಾಗದ ಮಕ್ಕಳಿಗೆ ಇದುವರೆಗೂ ಶಿಕ್ಷಣ ಸಿಕ್ಕಿಲ್ಲ. ಇದು ಹೀಗೆ ಮುಂದುವರಿದ್ರೆ ಶಿಕ್ಷಣ ವ್ಯವಸ್ಥೆ ತುಂಬಾ ಶೋಚನೀಯ ಮಟ್ಟ ತಲುಪಲಿದೆ. 2660 ಬಾಲ್ಯ ವಿವಾಹಗಳು ಆಗಿವೆ. ಮಕ್ಕಳಿಗೆ ಪೌಷ್ಟಿಕಾಹಾರದ ಕೊರತೆ ಎದುರಾಗಿದೆ. ಶೇ. 40 ರಷ್ಟು ಮಕ್ಕಳು ಬಡ ಕುಟುಂಬದ ಕೆಳಗಡೆ ಇದ್ದಾರೆ. ಮಕ್ಕಳ ಬಳಿ ಮೊಬೈಲ್ ಪೋನ್ ಇಲ್ಲ. ಆನ್ ಲೈನ್ ಶಿಕ್ಷಣ ಮಕ್ಕಳಿಗೆ ಹೇಗೆ ತಲುಪುತ್ತಿದೆ ಅನ್ನೋದು ಗೊತ್ತಾಗುತ್ತಿಲ್ಲ. ಈ ಹಿಂದೆ ಹಲವು ತಜ್ಞರು ಶಾಲೆ ಓಪನ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು. ಅದ್ರು ಆಗ ಶಾಲೆ ಪ್ರಾರಂಭವಾಗಿಲ್ಲ.ಈಗ ಮತ್ತೆ ಪಾಸಿಟಿವಿಟಿ ರೇಟ್ ಹೆಚ್ಚಾಗ್ತಾ ಇದೆ. ಈಗ ಮೂರನೇ ಅಲೆ ಬಾಗಿಲ ಬಳಿ ಬಂದು ನಿಂತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಓಪನ್ ಮಾಡಲು ಸಾಧ್ಯವಿಲ್ಲ. ಸರ್ಕಾರಕ್ಕೆ ರುಪ್ಸಾ ಒಕ್ಕೂಟ ಕೆಲ ಸಲಹೆಗಳನ್ನ ನೀಡಿದೆ.
ಭೌತಿಕ ತರಗತಿ ಪ್ರಾರಂಭ ಮಾಡಲು ಸಾಧ್ಯವಿಲ್ಲವಾದ್ರೆ ವಿದ್ಯಾಗಮವಾದರೂ ಪ್ರಾರಂಭಿಸುವಂತೆ ರುಪ್ಸಾ ಮನವಿ ಮಾಡಿದೆ. ಈ ಹಿಂದೆ ವಾರದಲ್ಲಿ ಎರಡು ದಿನ ತರಗತಿ ನಡೆಸಲಾಗುತ್ತಿತ್ತು. ಕನಿಷ್ಠ ಎರಡು ದಿನ ಮಕ್ಕಳು ಶಾಲೆ ಮುಖ ನೋಡುವಂತೆ ಮಾಡಲಿ ಎಂದು ರುಪ್ಸಾ ಲೋಕೇಶ್ ತಾಳಿಕಟ್ಟೆ ಬಣ ಒತ್ತಾಯ ಮಾಡುತ್ತಿದೆ.
ಒಟ್ಟಾರೆ ತಜ್ಞರು ಹಾಗೂ ವೈದ್ಯರ ಪ್ರಕಾರ ಸದ್ಯದ ಸ್ಥಿತಿಯಲ್ಲಿ ಶಾಲೆಗಳ ಆರಂಭದಿಂದ ಅಪಾಯ ಇದೆ. ಹೀಗಾಗಿ ಶಾಲೆಗಳ ಆರಂಭ ಬಹುತೇಕ ಡೌಟ್ ಇದೆ. ಆದ್ರೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಶಾಲೆಗಳ ಆರಂಭಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಾ ಕಾದು ನೋಡಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1285 ಸೋಂಕು ದೃಢ, 25 ಮಂದಿ ಬಲಿ