Select Your Language

Notifications

webdunia
webdunia
webdunia
Sunday, 6 April 2025
webdunia

ಕಾಮುಕನ ಕಿರುಕುಳದಿಂದ ಗರ್ಭಿಣಿಯಾದ ಯುವತಿ: ಬೆದರಿಕೆಗೆ ಅಂಜಿ ಆತ್ಮಹತ್ಯೆ!

sexuvally harreasment: lady sucide in raichuru
bangalore , ಸೋಮವಾರ, 2 ಆಗಸ್ಟ್ 2021 (17:58 IST)
ತಂದೆ ತಾಯಿಯ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಮಹಿಳೆ ಈಕೆ, 25 ವಯಸ್ಸಾದರೂ ಮದುವೆಯಾಗಿರಲಿಲ್ಲ, ಊರಿನ ಕಾಮುಕನೊಬ್ಬನಿಗೆ ಈಕೆಯ ಮೇಲೆ ಕಣ್ಣುಬಿದ್ದು ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ, ಗರ್ಭದಾರಣೆಯಾದಗ ಗರ್ಭಪಾತ ಮಾಡಿಸಿಕೋ, ಇಲ್ಲದಿದ್ದರೆ ವಿಷ ಕುಡಿಸಿ ಕೊಲ್ಲುತ್ತೇನೆ ಎಂದು ಎದುರಿಸಿದ್ದ, ಆದ್ದರಿಂದ ಆತಂಕಗೊಂಡ ಮಹಿಳೆ ತಾನೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಯಚೂರು ತಾಲ್ಲೂಕಿನ ತಿಮ್ಮಾಪುರ ಗ್ರಾಮದ ನಿವಾಸಿ ರಮೇಶ್ ಲೈಂಗಿಕ ದೌರ್ಜನಕ್ಕೆ ಮಹಿಳೆ ಬಲಿಯಾಗಿದ್ದಾಳೆ. ಮದುವೆಯಾಗದೆ ತಂದೆ ತಾಯಿ ಜೊತೆಯಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಶಾಂತಮ್ಮಳಿಗೆ ಹಗಲು ರಾತ್ರಿ ಎನ್ನದೆ ಲೈಂಗಿಕ ಕಿರುಕುಳ ನೀಡುತ್ತಲೇ ಇದ್ದ, ಕೆಲವೊಮ್ಮೆ ರಾತ್ರಿ ವೇಳೆಯಲ್ಲಿ ಮನೆಗೆ ಬಂದು ಮಗಳಿಗೆ ಕಿರುಕುಳ ನೀಡುತ್ತಿದ್ದ, ಹಿಡಿಯಲು ಹೋದಾಗ ಕೆಲವೊಮ್ಮೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಎಂದು ಹೆತ್ತವರು ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.
ಕಳೆದ  ವರ್ಷಗಳಿಂದ ಈಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಯಾವಾಗ ಈಕೆ ಗರ್ಭಿಣಿ ಎಂದು ತಿಳಿದ ಮೇಲೆ, ಈಕೆಯ ಮೇಲೆ ರೇಗಾಡಿ ಗರ್ಭಪಾತ ಮಾಡಿಸಿಕೊಳ್ಳಲು ಎಂದು ಆಗ್ರಹಿಸಿದ್ದಾನೆ. ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ವಿಷ ಕುಡಿಸಿ ಸಾಯಿಸುವುದಾಗಿ ಹೆದರಿಸಿದ್ದಾರೆ. 
ಇದರಿಂದ ಆತಂಕಕ್ಕೆ ಒಳಗಾದ ಮಹಿಳೆ ಜೂನ್ 29ರಂದು ವಿಷ ಕುಡಿದಿದ್ದಾಳೆ, 3 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಇಂದು ಮೃತಪಟ್ಟಿದ್ದಾಳೆ. ಇಂದು ನಗರದ ಮಹಿಳಾ ಪೊಲೀಸ್ ಠಾಣೆಗೆ ಕುಟುಂಬಸ್ಥರೆಲ್ಲ ಹೋಗಿ ತಾಯಿಯಿಂದ ಪ್ರಕರಣ ದಾಖಲಿಸಿ, ಡಿಎನ್ ಎ ಪರೀಕ್ಷೆ ನಡೆಸಿ ಆತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
suicide

Share this Story:

Follow Webdunia kannada

ಮುಂದಿನ ಸುದ್ದಿ

ಬೆಳಗಾವಿ ತಾಲೂಕಿಗೆ ಒಮ್ಮೆಯೂ ಸಿಕ್ಕಿಲ್ಲ ಮಂತ್ರಿಗಿರಿ ಬಾಗ್ಯ?