Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ವೈಷ್ಣವಿ

Vaishnavi is the one who left the Bigg Boss house
bangalore , ಭಾನುವಾರ, 8 ಆಗಸ್ಟ್ 2021 (20:58 IST)
ಅಗ್ನಿಸಾಕ್ಷಿ ಖ್ಯಾತಿಯ ಕಿರುತೆರೆ ನಟಿ ವೈಷ್ಣವಿ ಗೌಡ ಬಿಗ್ ಬಾಸ್ ಮನೆಯ ಫಿನಾಲೆಯ 5 ಸ್ಪರ್ಧಿಗಳ ಪೈಕಿ ನಾಲ್ಕನೇಯವರಾಗಿ ಹೊರಬಿದ್ದಿದ್ದಾರೆ. ಈ ಮೂಲಕ ಬಿಗ್ ಬಾಸ್ ನಲ್ಲಿ ಅಚ್ಚರಿ ಫಲಿತಾಂಶ ಹೊರಬಿದ್ದಿದೆ.
ಬಿಗ್ ಬಾಸ್ ಮನೆಯ ಮೊದಲ ಇನಿಂಗ್ಸ್ ನಲ್ಲಿ ನಿರಾಸೆ ಉಂಟು ಮಾಡಿದ್ದರೂ ಎರಡನೇ ಇನಿಂಗ್ಸ್ ನಲ್ಲಿ ಜನರ ವಿಶ್ವಾಸ, ಪ್ರೀತಿ ಗಳಿಸಲು ಯಶಸ್ವಿಯಾಗಿದ್ದ ವೈಷ್ಣವಿ ಗೌಡ, ಶನಿವಾರ ಪ್ರಶಾಂತ್ ಸಂಬರ್ಗಿ ನಂತರ ವೈಷ್ಣವಿ ಹೊರಬಿದ್ದಿದ್ದಾರೆ.
ಇತರೆ ಸ್ಪರ್ಧಿಗಳು ಹಾಗೂ ಎಲ್ಲರೂ ದಿವ್ಯಾ ಉರುಡುಗ ಹೊರಬೀಳುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಅಚ್ಚರಿ ಎಂಬಂತೆ ವೈಷ್ಣವಿ ಗೌಡ ಹೊರಬಿದ್ದಿದ್ದು, ಭಾನುವಾರ ನಡೆಯುವ ಫೈನಲ್ ನಲ್ಲಿ ಮಂಜು ಪಾವಗಡ, ಅರವಿಂದ್ ಮತ್ತು ದಿವ್ಯಾ ಉರುಡುಗ ಸ್ಥಾನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇದಿಸುವ ಅಭಿಯಾನ