Publish Date: Thu, 15 Jul 2021 (10:33 IST)
Updated Date: Thu, 15 Jul 2021 (09:38 IST)
ಬೆಂಗಳೂರು: ಹೇಗಾದರೂ ಸರಿಯೇ ಮುಂದಿನ ಸಾರಿ ಅಧಿಕಾರಕ್ಕೇರಲೇಬೇಕು ಎಂದು ಪಣತೊಟ್ಟಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಈಗ ತೋಟದ ಮನೆಯಲ್ಲಿದ್ದುಕೊಂಡೇ ಸೂತ್ರ ಹೆಣೆಯುತ್ತಿದ್ದಾರೆ.
ಸದ್ಯಕ್ಕೆ ಬಿಡದಿ ಬಳಿಯ ತಮ್ಮ ತೋಟದ ಮನೆಯಲ್ಲಿರುವ ಕುಮಾರಸ್ವಾಮಿ ಆಷಾಢ ಕಳೆದ ಮೇಲೆ ರಾಜ್ಯ ಪ್ರವಾಸ ಮಾಡುವ ತಯಾರಿ ನಡೆಸಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸೀಟ್ ಹೆಚ್ಚಿಸಲು ಈಗಿಂದಲೇ ಜನರನ್ನು ಸೆಳೆಯಲು ಪ್ರವಾಸ ಮಾಡಲಿದ್ದಾರೆ. ತಳ ಮಟ್ಟದಿಂದಲೇ ಪಕ್ಷ ಸಂಘಟಿಸುವುದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ವಲಯದ ಅಭಿವೃದ್ಧಿ ಬಗ್ಗೆ ತಮ್ಮದೇ ರೂಪುರೇಷೆ ಹಾಕಿಕೊಂಡು ಜನರ ಮುಂದಿಡಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.