ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮುಂದುವರಿಸಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಇಂದು ಗಣಿಗಾರಿಕೆ ನಡೆಯುತ್ತಿರುವ ಬೇಬಿ ಬೆಟ್ಟಕ್ಕೆ ಭೇಟಿ ಕೊಡಲಿದ್ದಾರೆ. ಬಳಿಕ ಕೆಆರ್ ಎಸ್ ಜಲಾಶಯಕ್ಕೂ ಭೇಟಿ ಕೊಡಲಿದ್ದಾರೆ.
ಕೆಆರ್ ಎಸ್ ಜಲಾಶಯಕ್ಕೆ ಅಕ್ರಮ ಗಣಿಗಾರಿಕೆಯಿಂದ ಹಾನಿಯಾಗಿದೆ ಎಂದು ಸುಮಲತಾ ಆರೋಪಿಸಿದ್ದರು. ಇದರ ಬಗ್ಗೆ ಇಂದು ಅವರು ಖುದ್ದಾಗಿ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.
ಇನ್ನು, ಸುಮಲತಾ ಕೆಆರ್ ಎಸ್ ಗೆ ಭೇಟಿ ಕೊಡುತ್ತಿರುವ ಮಾಹಿತಿ ಬೆನ್ನಲ್ಲೇ ರಾತ್ರೋ ರಾತ್ರಿ ಜಲಾಶಯದ ಬಳಿಕ ದುರಸ್ಥಿ ಕೆಲಸಗಳು ನಡೆದಿವೆ ಎನ್ನಲಾಗಿದೆ. ಇನ್ನು ಸುಮಲತಾ ಭೇಟಿಗೆ ಜೆಡಿಎಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಯಾವ ರೀತಿಯ ಹೈಡ್ರಾಮಾ ನಡೆಯುತ್ತದೆ ಎಂದು ಕಾದುನೋಡಬೇಕಿದೆ.