Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಿರ್ಮಾಪಕ ರಾಕ್ ಲೈನ್ ಮನೆಗೆ ಬಾಟಲಿ ಎಸೆದ ದುಷ್ಕರ್ಮಿಗಳು

webdunia
ಮಂಗಳವಾರ, 13 ಜುಲೈ 2021 (09:50 IST)
ಬೆಂಗಳೂರು: ಸುಮಲತಾ-ಎಚ್ ಡಿಕೆ ನಡುವಿನ ಮಾತಿನ ಚಕಮಕಿ ನಡುವೆ ಸುಮಲತಾ ಬೆಂಬಲಿಸಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಗೆ ಯಾರೋ ಕಿಡಿಗೇಡಿಗಳು ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ.


ರಾಕ್ ಲೈನ್ ನಿವಾಸಕ್ಕೆ ಮೊನ್ನೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ಆದರೆ ಈಗ ತಮ್ಮ ಮನೆಗೆ ಯಾರೋ ದುಷ್ಕರ್ಮಿಗಳು ಬಾಟಲಿ ಎಸೆದು ಬೆದರಿಸುವ ಯತ್ನ ಮಾಡಿದ್ದಾರೆ ಎಂದು ರಾಕ್ ಲೈನ್ ಆರೋಪಿಸಿದ್ದಾರೆ. ಆದರೆ ಈ ಬೆದರಿಕೆಗೆಲ್ಲಾ ಜಗ್ಗಲ್ಲ. ಏನೇ ಆದರೂ ಅಂಬರೀಶ್ ಕುಟುಂಬಕ್ಕೆ ನನ್ನ ಬೆಂಬಲವಿದ್ದೇ ಇರುತ್ತದೆ ಎಂದಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ರಾಜಕೀಯ ಜಟಾಪಟಿಗೂ ದರ್ಶನ್ ಗೆ ವಂಚನೆ ಪ್ರಕರಣಕ್ಕೂ ಸಂಬಂಧ?!